ಭಾರತ, ಮೇ 11 -- Chef Chidambara title track: ಕಿರುತೆರೆಯಲ್ಲಿ ಜೊತೆ ಜೊತೆಯಲಿ ಸೀರಿಯಲ್‌ ಮೂಲಕ ಕಮಾಲ್‌ ಮಾಡಿದ್ದ ನಟ ಅನಿರುದ್ಧ ಜತ್ಕರ್‌, ಒಂದಷ್ಟು ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಆ ಪಾತ್ರದಿಂದಲೇ ಹಿಂದೆ ಸರಿದರು. ಜೊತೆ ಜೊತೆಯಲಿ ಧಾರಾವಾಹಿಯಿಂದ ಹೊರಬಂದು, ಸೂರ್ಯವಂಶ ಸೀರಿಯಲ್‌ ಘೋಷಣೆ ಮಾಡಿದರು. ಅದರ ಜತೆಯಲ್ಲಿಯೇ chef ಚಿದಂಬರ ಸಿನಿಮಾ ಸಹ ಘೋಷಣೆ ಮಾಡಿ ಸುದ್ದಿಯಾಗಿದ್ದರು. ಈಗ ಇದೇ chef ಚಿದಂಬರ ಸಿನಿಮಾ ಬಿಡುಗಡೆಯ ಸನಿಹಕೆ ಬಂದು ನಿಂತಿದೆ. ಅಂದರೆ, ಸದ್ದಿಲ್ಲದೆ ಸಿನಿಮಾ ಪ್ರಚಾರಕ್ಕೆ ಅಣಿಯಾಗುತ್ತಿದೆ.

ಎಂ.ಆನಂದರಾಜ್ ನಿರ್ದೇಶನದ chef ಚಿದಂಬರ ಸಿನಿಮಾದಲ್ಲಿ ಬಹು ವರ್ಷಗಳ ಬಳಿಕ ಬೆಳ್ಳಿತೆರೆಮೇಲೆ ಮತ್ತೆ ನಾಯಕರಾಗಿ ಎಂಟ್ರಿಕೊಟ್ಟಿದ್ದಾರೆ ನಟ ಅನಿರುದ್ಧ ಜತ್ಕರ್.‌ ವಿಶೇಷ ಎನಿಸುವ ಪಾತ್ರವನ್ನೇ ಆಯ್ಕೆ ಮಾಡಿಕೊಂಡು, ಕುತೂಹಲ ಮೂಡಿಸಿದ್ದರು. ಅದಾದ ಬಳಿಕ ಬಂದ chef ಚಿದಂಬರ ಚಿತ್ರದ ಫಸ್ಟ್‌ ಲುಕ್‌, ಕಿರು ಟೀಸರ್‌ ಗಮನ ಸೆಳೆದಿತ್ತು. ಈಗ ಇದೇ ಚಿತ್ರದ ಟೈಟಲ್‌ ಟ್ರ್ಯಾಕ್‌ ಹೊರಬಂದಿದೆ. ವಿಶೇಷ ಏನೆ...