Bangalore, ಮಾರ್ಚ್ 28 -- Actress Chaya Singh and Krishna: ಕನ್ನಡದ ಜನಪ್ರಿಯ ಧಾರಾವಾಹಿ ಅಮೃತಧಾರೆಯಲ್ಲಿ ಭೂಮಿಕಾಳಾಗಿ ಕಿರುತೆರೆ ವೀಕ್ಷಕರ ಹೃದಯ ಕದ್ದಿರುವ ನಟಿ ಛಾಯಾ ಸಿಂಗ್‌ ಅವರು ತನ್ನ ಪತಿಯನ್ನು ಭೇಟಿಯಾಗಿದ್ದಾರೆ. ಗಂಡ ಮತ್ತು ಹೆಂಡತಿ ಭೇಟಿಯಾಗುವುದರಲ್ಲಿ ವಿಶೇಷ ಏನಿದೆ ಎಂದು ನೀವು ಕೇಳಬಹುದು. ಆದರೆ, ಇವರ ವಿಚಾರದಲ್ಲಿ ವಿಶೇಷ ಇದೆ. ಇವರಿಬ್ಬರು ತಮ್ಮ ವೃತ್ತಿಜೀವನಕ್ಕೆ ಸಮಯ ನೀಡುವ ಸಲುವಾಗಿ ಸಾಕಷ್ಟು ಸಮಯ ದೂರದೂರ ಇರುತ್ತಾರೆ.

Actress Chaya Singh and Krishna: ನಟ ಕೃಷ್ಣಾ ಅವರು ಚೆನ್ನೈನಲ್ಲಿ ಬಿಝಿ ಇರುತ್ತಾರೆ. ನಟಿ ಛಾಯಾ ಸಿಂಗ್‌ ಬೆಂಗಳೂರಿನಲ್ಲಿ ಸೀರಿಯಲ್‌ ಅಥವಾ ಸಿನಿಮಾ ಶೂಟಿಂಗ್‌ನಲ್ಲಿ ಬಿಝಿ ಇರುತ್ತಾರೆ. ಇವರಿಬ್ಬರು ಕೆಲವೊಮ್ಮೆ ಭೇಟಿಯಾಗುವಾಗ "ಎರಡು ವರ್ಷ" ಆಗುತ್ತದೆ ಎಂದು ಇತ್ತೀಚೆಗೆ ಯೂಟ್ಯೂಬ್‌ ಸಂದರ್ಶನದಲ್ಲಿ ಹೇಳಿದ್ದರು.

ನಟಿ ಛಾಯಾ ಸಿಂಗ್‌ ಮತ್ತು ಕೃಷ್ಣಾ ಅವರದ್ದು ಲವ್‌ ಸ್ಟೋರಿ. ಇವರಿಬ್ಬರು 2010 ರಲ್ಲಿ ಬಿಡುಗಡೆಯಾಗಿದ್ದ ಅನಂತಪುರಥು ವೀಡು ಎಂಬ ಸಿನಿಮಾದಲ್ಲಿ ಜತೆಯಾಗ...