ಭಾರತ, ಏಪ್ರಿಲ್ 19 -- ಹಿಂದೂಗಳಿಗೆ ಅತ್ಯಂತ ಪವಿತ್ರ ಯಾತ್ರೆಗಳಲ್ಲಿ ಚಾರ್‌ ಧಾಮ್‌ ಯಾತ್ರೆ (Char Dham Yatra) ಬಹಳ ಪ್ರಾಮುಖ್ಯತೆಯನ್ನು ಹೊಂದಿದೆ. ಈ ನಾಲ್ಕು ಪುಣ್ಯ ಕ್ಷೇತ್ರಗಳನ್ನು ಶಿವನ ವಾಸಸ್ಥಾನ ಎಂದು ಕರೆಯಲಾಗುತ್ತದೆ. ಉತ್ತರಾಖಂಡ್‌ನಲ್ಲಿರುವ ಚಾರ್‌ ಧಾಮ್‌ ಹಿಂದೂಗಳಿಗೆ ಪುಣ್ಯ ಕ್ಷೇತ್ರಗಳಾಗಿವೆ. ಇದನ್ನ ದೇವಭೂಮಿ ಅಂತಲೇ ಹೇಳುತ್ತಾರೆ. ಕೇದಾರನಾಥ, ಬದರಿನಾಥ, ಗಂಗೋತ್ರಿ ಮತ್ತು ಯಮುನೋತ್ರಿ ಇವುಗಳೇ ಚಾರ್‌ ಧಾಮ್‌ಗಳು. ಜೀವನದಲ್ಲಿ ಒಮ್ಮೆಯಾದರೂ ಚಾರ್‌ ಧಾಮ್‌ ಯಾತ್ರೆ ಮಾಡಿ ಪುಣ್ಯಗಳಿಸಬೇಕೆಂಬುದು ಅನೇಕ ಶಿವನ ಭಕ್ತರ ಕನಸು. ಅದಕ್ಕಾಗಿ ತಿಂಗಳುಗಳ ಮೊದಲೇ ತಯಾರಿ ನಡೆಸುವವರೂ ಇದ್ದಾರೆ. ಚಾರ್‌ ಧಾಮ್‌ಗೆ ಭೇಟಿ ನೀಡಬೇಕೆಂದರೆ ಭಕ್ತರು ತಮ್ಮ ಹೆಸರನ್ನು ಮೊದಲೇ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. ಚಾರ್‌ ಧಾಮ್‌ಗಳಲ್ಲಿ ಕೇದಾರನಾಥ ಮತ್ತು ಬದರಿನಾಥ ಪುಣ್ಯಕ್ಷೇತ್ರಕ್ಕೆ (Kedarnath Badrinath Registration) ಹೋಗಲು ಈಗಾಗಲೇ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದೆ. ಆದರೆ ಗಂಗೋತ್ರಿ ಮತ್ತು ಯಮುನೋತ್ರಿಗೆ (Ga...