Bengaluru, ಫೆಬ್ರವರಿ 9 -- ಭಾರತದ ಇತಿಹಾಸದಲ್ಲಿ ಅನೇಕ ಮಹಾನ್‌ ವಿದ್ವಾಂಸರನ್ನು ಕಾಣಬಹುದು. ಅವರ ಮಾತುಗಳು ಎಷ್ಟು ಮಹತ್ವದ್ದಾಗಿದೆಯೆಂದರೆ ಇಂದಿಗೂ ಅಗತ್ಯ ಬಿದ್ದಾಗಲೆಲ್ಲಾ ಜನರು ಅದನ್ನು ಅನುಸರಿಸುತ್ತಾರೆ. ಅಂತಹ ಮಾಹಾನ್‌ ವಿದ್ವಾಂಸರಲ್ಲಿ ಆಚಾರ್ಯ ಚಾಣಕ್ಯರು ಒಬ್ಬರು. ಅವರು ತತ್ವಜ್ಞಾನಿಗಳು, ಅರ್ಥಶಾಸ್ತ್ರಜ್ಞರು, ರಾಜನೀತಿತಜ್ಞರು. ಅವರಿಗೆ ಜೀವನದ ಪ್ರತಿಯೊಂದು ಅಂಶಗಳ ಬಗ್ಗೆ ಅದ್ಭುತ ಜ್ಞಾನವಿತ್ತು. ಆ ಜ್ಞಾನವನ್ನು ಅವರು ಜನಸಾಮಾನ್ಯರೊಂದಿಗೆ ಹಂಚಿಕೊಳ್ಳಲು ತಮ್ಮ ನೀತಿಯನ್ನು ಬರೆದರು. ಅದು ಚಾಣಕ್ಯ ನೀತಿಯೆಂದೇ ಪ್ರಸಿದ್ಧಿಯನ್ನು ಪಡೆದಿದೆ. ಜೀವನದಲ್ಲಿ ಹಣ ಗಳಿಸುವುದು ಸುಲಭದ ವಿಷಯವಲ್ಲ. ಹಣ ಗಳಿಸುವುದರಷ್ಟೇ ಮುಖ್ಯ ಅದನ್ನು ಕಾಪಾಡಿಕೊಂಡು ಹೋಗುವುದು. ಹಣ ಎಲ್ಲಿಯೂ ಪೋಲಾಗದಂತೆ ಎಚ್ಚರಿಕೆವಹಿಸುವುದು ಕೂಡಾ ಬಹಳ ಅವಶ್ಯಕವಾದ ಸಂಗತಿಯಾಗಿದೆ. ಆಚಾರ್ಯ ಚಾಣಕ್ಯರ ಪ್ರಕಾರ ಹಣ ಗಳಿಸಲು ಏನು ಮಾಡಬೇಕು ಮತ್ತು ಅದರ ಬಗ್ಗೆ ಎಚ್ಚರಿಕೆವಹಿಸುವುದು ಹೇಗೆ ಎಂಬುದನ್ನು ಈ ನೀತಿಗಳಿಂದ ತಿಳಿದುಕೊಳ್ಳಿ.

ಒಬ್ಬ ವ್ಯಕ್ತಿಯು ತನ್ನ...