Bengaluru, ಫೆಬ್ರವರಿ 22 -- ಮನುಷ್ಯ ಹುಟ್ಟಿನಿಂದ ಸಾಯುವವರೆಗೆ ಪ್ರತಿದಿನ ಒಂದಿಷ್ಟು ದಿನಚರಿಯನ್ನು ಪಾಲಿಸಲೇಬೇಕು. ಅವುಗಳಲ್ಲಿ ಊಟ ಹಾಗೂ ನಿದ್ದೆ ಪ್ರಮುಖವಾಗಿದೆ. ಮನುಷ್ಯ ಆರೋಗ್ಯದಿಂದ ಇರಲು ಊಟ ಮತ್ತು ನಿದ್ದೆ ಸರಿಯಾಗಿ ಬೇಕು. ಯಾವುದಾದರೂ ಒಂದರಲ್ಲಿ ವ್ಯತ್ಯಾಸವಾದರೂ ಆರೋಗ್ಯ ಹದಗೆಡುತ್ತದೆ. ಊಟ ಎಷ್ಟು ಮುಖ್ಯವೋ ನಿದ್ದೆಯೂ ಅಷ್ಟೇ ಮುಖ್ಯ. ನಿದ್ದೆ ಮಾಡಲು ಒಂದು ಸಮಯವಿದೆ. ರಾತ್ರಿಯ ವೇಳೆಯಲ್ಲಿ 7 ರಿಂದ 8 ಗಂಟೆ ಮಾಡುವ ನಿದ್ದೆ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಮಾರನೆ ದಿನ ಚೈತನ್ಯದಿಂದ ಕೂಡಿರುವಂತೆ ಮಾಡುತ್ತದೆ. ಆದರೆ ಕೆಲವರಿಗೆ ರಾತ್ರಿ ನಿದ್ದೆ ಮಾಡಿಯೂ ಹಗಲಿನ ಸಮಯದಲ್ಲಿ ನಿದ್ದೆ ಮಾಡುವ ಅಭ್ಯಾಸವಿರುತ್ತದೆ. ಅದು ತಪ್ಪು ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ತಮ್ಮ ನೀತಿಶಾಸ್ತ್ರದಿಂದಲೇ ಪ್ರಖ್ಯಾತರಾಗಿರುವ ಆಚಾರ್ಯ ಚಾಣಕ್ಯರು‌ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಅನೇಕ ವಿಷಯಗಳನ್ನು ಹೇಳಿದ್ದಾರೆ. ಅವು ಇಂದಿನ ಕಾಲಕ್ಕೂ ಅನ್ವಯಿಸುತ್ತದೆ. ಆಚಾರ್ಯ ಚಾಣಕ್ಯರು ತಮ್ಮ ನೀತಿ ಶಾಸ್ತ್ರದಲ್ಲಿ ವ್ಯಕ್ತಿಯ ಆರೋಗ್...