Bengaluru, ಮಾರ್ಚ್ 26 -- ಒಂದು ಸಂಬಂಧವನ್ನು ಕೊನೆಗೊಳಿಸುವುದು ಅಥವಾ ವ್ಯಕ್ತಿಯ ಜೀವನದಿಂದ ಹೊರಬರುವುದು ಎಂದರೆ ಸರಳವಾಗಿ ಒಂದು ಮೆಸ್ಸೇಜ್‌ ಹಾಕಿ ಎಲ್ಲವನ್ನು ಕೊನೆಗಾಣಿಸಬಹುದು ಎಂದುಕೊಂಡಿದ್ದರೆ ಅದು ಅಷ್ಟು ಸುಲಭವಲ್ಲ. ಕೆಲವೊಮ್ಮೆ ಅದರಿಂದ ಬಗೆಹರಿಯದಂತಹ ಸಮಸ್ಯೆಗಳು ಉದ್ಭವವಾಗಬಹುದು. ಸ್ನೇಹವನ್ನು ಅದರಲ್ಲೂ ಅರ್ಥಪೂರ್ಣವಾದ ಹಾಗೂ ನಿಜವಾದ ಸ್ನೇಹದಿಂದ ಹೊರಬರುವುದೆಂದರೆ ಕೇವಲ ದೂರ ಉಳಿಯುವುದಲ್ಲ. ಅದು ಪರಸ್ಪರ ಗೌರವ ಮತ್ತು ತಿಳುವಳಿಕೆಯಿಂದ ಸ್ನೇಹವನ್ನು ಕೊನೆಗಾಣಿಸುವುದಾಗಿದೆ.ಇದರಲ್ಲಿ ಕಾಳಜಿ ಹಾಗೂ ಪ್ರಬುದ್ಧತೆಯನ್ನು ತೋರಿಸಬೇಕಾಗುತ್ತದೆ.

ಪುಸ್ತಕದಲ್ಲಿ ಇರುವ ಅಧ್ಯಾಯಗಳಿಗೆ ಹೇಗೆ ಆರಂಭ, ಮಧ್ಯ ಮತ್ತು ಅನಿವಾರ್ಯವಾಗಿ ಅಂತ್ಯ ಇರುವಂತೆ ಕೆಲವು ಸ್ನೇಹಗಳಿಗೂ ಇವೆಲ್ಲವೂ ಇರುತ್ತದೆ. ಇಲ್ಲಿ ಸಮಸ್ಯೆ ಇರುವುದು ಯಾವಾಗ ಸ್ನೇಹವನ್ನು ಕೊನೆಗಾಣಿಸಬೇಕೆಂಬುದಲ್ಲ, ಇತರರಿಗೆ ನೋವುಂಟಾಗಲು ಬಿಡದೆ ಸ್ನೇಹ ಕೊನೆಗಾಣಿಸುವುದು ಹೇಗೆ ಎಂಬುದಾಗಿದೆ. ವಿಶೇಷವಾಗಿ ದೀರ್ಘಕಾಲದ ಸ್ನೇಹವನ್ನು ಕೊನೆಗಾಣಿಸಲು ಬುದ್ಧಿವಂತಿಕೆ, ಜ್ಞಾನ,...