Bengaluru, ಫೆಬ್ರವರಿ 12 -- ವ್ಯಕ್ತಿಯ ಗುಣಸ್ವಭಾವ ಮತ್ತು ನಡವಳಿಕೆ ಅವನನ್ನು ಸಮಾಜದಲ್ಲಿ ಹಾಗೂ ಕುಟುಂಬದಲ್ಲಿ ಉತ್ತಮ ವ್ಯಕ್ತಿಯನ್ನಾಗಿ ಮಾಡುತ್ತದೆ. ಒಳ್ಳೆಯ ಗುಣಗಳಿರುವ ವ್ಯಕ್ತಿ ಸಮಾದಲ್ಲಿ ಉತ್ತಮ ಸ್ಥಾನ ಗಳಿಸುತ್ತಾನೆ. ಅದು ಅವನಿಗೆ ಘನತೆಯಿಂದ ಬದುಕಲು ಸಹಾಯ ಮಾಡುತ್ತದೆ. ಮನುಷ್ಯನಿಗೆ ಇರಬೇಕಾದ ಉತ್ತಮ ಗುಣಗಳಲ್ಲಿ ಪ್ರಾಮಾಣಿಕತೆ ಮತ್ತು ನಿಷ್ಪಕ್ಷಪಾತ್ರ ಪ್ರಮುಖವಾಗಿದೆ. ಸರಿಯಾದ ಮಾರ್ಗದಲ್ಲಿ ನಡೆದರೆ, ಯಾವುದೇ ಸಂದರ್ಭದಲ್ಲೂ ಭಯಪಡುವ ಅವಶ್ಯಕತೆಯಿರುವುದಿಲ್ಲ. ಒಳ್ಳೆಯ ನಡವಳಿಕೆಯನ್ನು ರೂಢಿಸಿಕೊಂಡ ವ್ಯಕ್ತಿ ಎಲ್ಲರಿಂದಲೂ ಗೌರವವನ್ನು ಪಡೆಯುತ್ತಾನೆ. ಚಾಣಕ್ಯರು ಅವರ ನೀತಿಶಾಸ್ತ್ರದಲ್ಲಿ ಮನುಷ್ಯನು ಜೀವನವನ್ನು ಯಾವ ರೀತಿ ನಡೆಸಬೇಕು ಎಂಬುದರ ಕುರಿತು ಸಲಹೆಗಳನ್ನು ನೀಡಿದ್ದಾರೆ. ಚಾಣಕ್ಯರು ಹೇಳುವಂತೆ ಮನುಷ್ಯ ಈ ಸಮಾಜದಲ್ಲಿ ಗೌರವದಿಂದ ಬಾಳಬೇಕು. ಕೆಲವು ಗುಣಗಳನ್ನು ಹೊಂದಿರುವವರು ಜೀವನದಲ್ಲಿ ಎಲ್ಲಕಡೆ ಗೌರವ ಹಾಗೂ ಉತ್ತಮ ಸ್ಥಾನ ಪಡೆಯುತ್ತಾರೆ. ಸಮಾಜದಲ್ಲಿ ಗೌರವ ಪಡೆಯಲು ಚಾಣಕ್ಯರು ಹೇಳಿರುವ ನೀತಿಗಳೇನು ಎಂದು...