Bengaluru, ಮಾರ್ಚ್ 16 -- ಸಾಮಾನ್ಯವಾಗಿ ಚಾಣಕ್ಯರ ನೀತಿ ಮೇಲ್ನೋಟಕ್ಕೆ ಕಷ್ಟವೆನಿಸುತ್ತದೆ. ಆದರೆ ಅವುಗಳನ್ನು ಅಳವಡಿಸಿಕೊಂಡರೆ ಸಂತೋಷದ ಜೀವನ ನಡೆಸಬಹುದು. ಲಕ್ಷ್ಮಿ ದೇವಿಯನ್ನು ಸಂಪತ್ತಿನ ಅಧಿದೇವತೆ ಎಂದು ಪರಿಗಣಿಸಲಾಗುತ್ತದೆ. ಆಚಾರ್ಯ ಚಾಣಕ್ಯರು ಲಕ್ಷ್ಮಿ ದೇವಿ ಸದಾ ನಿಮ್ಮ ಮನೆಯಲ್ಲಿ ನೆಲೆಸಲು ಕೆಲವು ಸಲಹೆಗಳನ್ನು ತಮ್ಮ ನೀತಿ ಶಾಸ್ತ್ರದಲ್ಲಿ ಹೇಳಿದ್ದಾರೆ. ಎಲ್ಲರಿಗೂ ಲಕ್ಷ್ಮಿ ದೇವಿಯ ಆಶೀರ್ವಾದ ಸುಲಭವಾಗಿ ದೊರೆಯುವುದಿಲ್ಲ. ಅದಕ್ಕೆ ಕಾರಣ ನಿಮ್ಮಲ್ಲಿಯೇ ಇರುತ್ತದೆ ಎಂದು ಚಾಣಕ್ಯರು ಹೇಳುತ್ತಾರೆ. ನಿಮ್ಮಲ್ಲಿರುವ ಕೆಲವು ಕೆಟ್ಟ ಅಭ್ಯಾಸಗಳು ಲಕ್ಷ್ಮಿ ದೇವಿಯನ್ನು ನಿಮ್ಮಿಂದ ದೂರವಿಡುತ್ತದೆ. ಹಾಗಾದರೆ ಆ ಅಭ್ಯಾಸಗಳು ಯಾವುವು ಎಂಬುದನ್ನು ಚಾಣಕ್ಯರು ತಮ್ಮ ನೀತಿಯಲ್ಲಿ ವಿವರಿಸಿದ್ದಾರೆ. ಲಕ್ಷ್ಮಿ ದೇವಿಯು ನಿಮ್ಮನ್ನು ಕೈಬಿಡದಂತೆ ನೋಡಿಕೊಳ್ಳಲು ಈ ಅಭ್ಯಾಸಗಳನ್ನು ತ್ಯಜಿಸಬೇಕು ಎಂದು ಚಾಣಕ್ಯ ಹೇಳಿದ್ದಾರೆ.

ಇದನ್ನೂ ಓದಿ: Touching Feet: ಹಿಂದೂ ಧರ್ಮದ ಪ್ರಕಾರ ಯಾರ ಪಾದಗಳನ್ನು ಮುಟ್ಟಬಾರದು, ಮುಟ್ಟಿದರೆ ಏನಾಗ...