ಭಾರತ, ಮಾರ್ಚ್ 21 -- ನನಗೆ ಜೀವನದಲ್ಲಿ ಯಾರೂ ಬೇಡ, ಯಾರೊಂದಿಗೂ ಸಂಬಂಧ ಬೇಕಾಗಿಲ್ಲ ಎಂದು ಯಾವತ್ತೂ ಭಾವಿಸಬೇಡಿ. ಏಕೆಂದರೆ ಯಾವಾಗ ನಮಗೆ ಬೇರೆಯವರ ಸಹಾಯ ಬೇಕಾಗುತ್ತದೆ ಎಂದು ನಮಗೆ ತಿಳಿದಿರುವುದಿಲ್ಲ. ಹಾಗಂತರ ಎಲ್ಲರನ್ನೂ ನಂಬುವುದು ಮತ್ತು ಎಲ್ಲರೊಂದಿಗೆ ಸಂಬಂಧವನ್ನು ಬೆಳೆಸುವುದೂ ಸಹ ಸರಿಯಲ್ಲ. ಈ ಸಮಾಜದಲ್ಲಿ ಒಟ್ಟಿಗೆ ವಾಸಿಸುವಾಗ ಎಲ್ಲರೊಂದಿಗೂ ಉತ್ತಮ ಸಂಬಂಧವನ್ನು ಹೊಂದಿರುವುದು ಒಳ್ಳೆಯದು. ಆದರೆ ಇದರರ್ಥ ನಾವು ಚೆನ್ನಾಗಿ ಮಾತನಾಡುವ ಪ್ರತಿಯೊಬ್ಬರನ್ನು ಕುರುಡಾಗಿ ನಂಬಬೇಕು ಎಂದೆಲ್ಲ. ಏನೂ ಯೋಚಿಸಿದೇ ಅವರು ಒಳ್ಳೆಯವರು ಎಂದು ಭಾವಿಸಲೂಬಾರದು. ಆಚಾರ್ಯ ಚಾಣಕ್ಯರು ತಮ್ಮ ನೀತಿ ಶಾಸ್ತ್ರದಲ್ಲಿ ನಂಬಿಕೆ ಅರ್ಹರಾದವರ ಸಂಗ ಮಾಡಬೇಕು ಎಂದು ಹೇಳುತ್ತಾರೆ. ಅದೇ ವೇಳೆ ಚಾಣಕ್ಯರು ನಂಬಿಕೆ ಅರ್ಹರು ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದೂ ಹೇಳುತ್ತಾರೆ. ಮಾನವನ ಜೀವನದಲ್ಲಿ ಸಂಬಂಧಗಳ ಮಹತ್ವವನ್ನು ಅವರು ಒತ್ತಿ ಹೇಳಿದ್ದಾರೆ. ನೀವು ಎಷ್ಟೇ ಕಷ್ಟಪಟ್ಟು ಕೆಲಸ ಮಾಡಿದರೂ, ನಿಮ್ಮ ಸುತ್ತಲಿನ ಜನರು ವಿಶ್ವಾಸಾರ್ಹರಲ್ಲದಿದ್ದರೆ, ...