BIengaluru, ಫೆಬ್ರವರಿ 26 -- ಮೌರ್ಯ ಸಾಮ್ರಾಜ್ಯದ ಸ್ಥಾಪನೆಯಲ್ಲಿ ಮಹತ್ವದ ಪಾತ್ರವಹಿಸಿದ್ದ ಆಚಾರ್ಯ ಚಾಣಕ್ಯರು ಅತ್ಯಂತ ಮೇಧಾವಿಯಾಗಿದ್ದರು. ಅವರು ಅರ್ಥಶಾಸ್ತ್ರ, ನೀತಿ ಶಾಸ್ತ್ರಗಳಂತಹ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಅವೆಲ್ಲವೂ ಸಾಮಾನ್ಯ ಜನರಿಗೆ ಇಂದಿಗೂ ಉತ್ತಮ ಮಾಹಿತಿಯನ್ನು ನೀಡುವ ಜ್ಞಾನದ ಭಂಡಾರಗಳಾಗಿವೆ. ಚಾಣಕ್ಯರು ಭಾರತ ದೇಶ ಕಂಡ ಮಹಾನ್‌ ವಿದ್ವಾಂಸರು. ಅವರು ಹೇಳಿರುವ ನೀತಿಗಳನ್ನು ಪಾಲಿಸುವುದರಿಂದ ಜೀವನದ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಚಾಣಕ್ಯರ ಪ್ರಕಾರ, ನಮ್ಮ ಸುತ್ತಮುತ್ತ ಮೂರ್ಖ ಹಾಗೂ ದುರಹಂಕಾರದಿಂದ ಕೂಡಿರುವ ವ್ಯಕ್ತಿಗಳನ್ನು ಕಾಣಬಹುದು. ಅವರಿಂದ ನಮಗೆ ಬೇಕಾದ ಕೆಲಸ ಸಾಧಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಏಕೆಂದರೆ ಅವರು ಜೀವನ ನಡೆಸುವ ರೀತಿಯೇ ಬೇರೆಯದ್ದಾಗಿರುತ್ತದೆ. ಸಾಮಾನ್ಯರಿಗೂ ಅವರಿಗೂ ಬಹಳ ವ್ಯತ್ಯಾಸವಿರುತ್ತದೆ. ಆದ್ದರಿಂದ ಬುದ್ಧಿವಂತ ವ್ಯಕ್ತಿ ಅಂತಹವರಿಂದ ಕೆಲಸ ತೆಗೆದುಕೊಳ್ಳಬೇಕೆಂದರೆ ಚಾಣಕ್ಯರ ಈ ಸೂತ್ರವನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಚಾಣಕ್ಯರ ಪ್ರಕಾರ...