Bengaluru, ಫೆಬ್ರವರಿ 19 -- ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದ ಮೂಲಕ ಈ ಜಗತ್ತಿನ ಕಣ್ಣನ್ನು ತೆರೆಸಿದ್ದಾರೆ. ಅವರು ನೀತಿಶಾಸ್ತ್ರದಲ್ಲಿ ಅನೇಕ ವಿಚಾರಗಳನ್ನು ಹೇಳಿದ್ದಾರೆ. ಸಮಾಜ ಸುಧಾರಿಸುವುದರಿಂದ ಹಿಡಿದು ಕುಟುಂಬ ವ್ಯವಸ್ಥೆ ಹೇಗಿರಬೇಕು ಎಂದು ಕಿವಿಮಾತು ಹೇಳಿದ್ದಾರೆ. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಅನೇಕ ಪ್ರಯೋಜನಗಳನ್ನು ಕಾಣಬಹುದಾಗಿದೆ. ಅದೇ ಕಾರಣಕ್ಕೆ ಇಂದಿಗೂ ಬಹಳಷ್ಟು ಜನರು ಚಾಣಕ್ಯ ನೀತಿಯನ್ನು ಅನುಸರಿಸುತ್ತಾರೆ. ಆಚಾರ್ಯ ಚಾಣಕ್ಯರು ಹೇಳುವಂತೆ ಒಬ್ಬ ವ್ಯಕ್ತಿ ಸಮಾಜದಲ್ಲಿ ಉತ್ತಮನಾಗಿ ಬಾಳಬೇಕೆಂದರೆ, ಮೊದಲು ಅವನ ಕುಟುಂಬವು ಸರಿಯಾಗಿರಬೇಕು. ಕುಟುಂಬವನ್ನು ಸರಿಯಾಗಿ ಮುನ್ನಡೆಸಿಕೊಂಡು ಹೋಗುವ ಉತ್ತಮ ಯಜಮಾನನಿರಬೇಕು. ಆಗ ಆ ಕುಟುಂಬದ ಇತರರೂ ಸಹ ಸಮಾಜದಲ್ಲಿ ಉತ್ತಮರಾಗಿ ಬಾಳಬಹುದು. ಆದರೆ ಕುಟುಂಬದ ಯಜಮಾನನಿಗೆ ಕೆಲವು ಅಭ್ಯಾಸಗಳಿದ್ದರೆ ಅದನ್ನು ಖಂಡಿತ ತ್ಯಜಿಸಬೇಕು. ಇಲ್ಲದಿದ್ದರೆ ಆ ಕುಟುಂಬ ಪ್ರಗತಿಯನ್ನು ಕಾಣುವುದಿಲ್ಲ ಎಂದು ಚಾಣಕ್ಯರು ಹೇಳುತ್ತಾರೆ. ಹಾಗಾದರೆ ಮನೆಯ ಯಜಮಾನ ಬಿಡಬೇಕಾದ ಅ...