Bengaluru, ಮಾರ್ಚ್ 19 -- ಆಚಾರ್ಯ ಚಾಣಕ್ಯರು ಮಹಾನ್‌ ತತ್ವಜ್ಞಾನಿಗಳು. ನೀತಿ ಶಾಸ್ತ್ರದ ರಚನಾಕಾರರಾದ ಚಾಣಕ್ಯರು ದೇಶ ವಿದೇಶಗಳಲ್ಲಿ ಜನಪ್ರಿಯರಾಗಿದ್ದಾರೆ. ತಮ್ಮ ನೀತಿ ಶಾಸ್ತ್ರದ ಮೂಲಕ ಜನಸಾಮಾನ್ಯರ ದಿನಿನಿತ್ಯದ ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸಿದ್ದಾರೆ. ಚಾಣಕ್ಯರ ನೀತಿಗಳು ಜನರಿಗೆ ಉತ್ತಮ ಸಂದೇಶಗಳಾಗಿವೆ. ಅವುಗಳನ್ನು ಜೀವನದಲ್ಲಿ ಸರಿಯಾಗಿ ಅಳವಡಿಸಿಕೊಂಡರೆ ಕಷ್ಟಗಳು ದೂರವಾಗುತ್ತವೆ. ಆಚಾರ್ಯ ಚಾಣಕ್ಯರ ಪ್ರಕಾರ, ನಮ್ಮಲ್ಲಿ ಕೆಲವರು ತುಂಬಾ ಅಪಾಯಕಾರಿ ವ್ಯಕ್ತಿಗಳಾಗಿರುತ್ತಾರೆ. ಅವರು ಹಾವು, ಚೇಳುಗಳಿಗಿಂತಲೂ ಹೆಚ್ಚು ಅಪಾಯವನ್ನುಂಟು ಮಾಡುವವರಾಗಿರುತ್ತಾರೆ. ಅಂತಹ ವ್ಯಕ್ತಿಗಳಿಂದ ಒಬ್ಬರ ಜೀವನವೇ ಹಾಳಾಗುತ್ತದೆ. ಮನಸ್ಸನ್ನು ವಿಷಪೂರಿತಗೊಳಿಸುವ ಕೆಟ್ಟ ಜನರಿಂದ ದೂರವಿರಬೇಕು ಎಂಬುದು ಚಾಣಕ್ಯರ ಸಲಹೆ. ಅಂತಹ ಜನರಿಂದ ಎಂದಿಗೂ ಸಹಾಯವನ್ನು ಕೇಳಬಾರದು. ನಾವು ಜೀವನದಲ್ಲಿ ಸಂತೋಷವಾಗಿ ಇರಬೇಕೆಂದರೆ ಅಂತಹ ಜನರಿಂದ ದೂರವಿರಬೇಕು. ಆಚಾರ್ಯ ಚಾಣಕ್ಯರ ಪ್ರಕಾರ ಇನ್ನೊಬ್ಬರ ಜೀವನವನ್ನು ಹಾಳುಮಾಡುವವರು ಯಾರು ಎಂದು ನೋಡೋಣ....