Bengaluru, ಮಾರ್ಚ್ 10 -- ಆಚಾರ್ಯ ಚಾಣಕ್ಯರಿಗೆ ಸಮಾಜಕ್ಕೆ ಸಂಬಂಧಿಸಿದ ಅನೇಕ ವಿಷಯಗಳ ಬಗ್ಗೆ ಆಳವಾದ ಗ್ರಹಿಕೆ ಇತ್ತು. ಜೀವನದ ಪ್ರತಿಯೊಂದು ವಿಷಯವನ್ನು ವಿಸ್ತಾರವಾಗಿ ವಿವರಿಸುವುದರ ಜೊತೆಗೆ ಅಲ್ಲಿ ಸೃಷ್ಟಿಯಾಗುವ ಸಮಸ್ಯೆಗಳಿಗೆ ಪರಿಹಾರ ಹಾಗೂ ಮುನ್ನೆಚ್ಚರಿಕೆಯನ್ನು ಕೂಡಾ ಚಾಣಕ್ಯರು ಹೇಳಿದ್ದಾರೆ. ಅವರು ಬರೆದ ನೀತಿ ಶಾಸ್ತ್ರವು ಜೀವನದ ಅನೇಕ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತವೆ ಎಂಬ ನಂಬಿಕೆಯಿದೆ. ಅದು ಮನಷ್ಯನಿಗೆ ಸುಂದರ ಬದುಕು ಕಟ್ಟಿಕೊಳ್ಳಲು ಬೇಕಾಗುವ ಅಪಾರ ಜ್ಞಾನ ಮತ್ತು ಅನುಭವಗಳನ್ನು ನೀಡುತ್ತವೆ. ಪ್ರತಿಯೊಬ್ಬರ ಜೀವನದಲ್ಲೂ ಅಡೆತಡೆಗಳು ಬರುತ್ತವೆ. ಆದರೆ ಅದ್ಯಾವುದು ಶಾಶ್ವತವಲ್ಲ ಎಂಬುದನ್ನು ಮರೆಯಬಾರದು. ಜೀವನದಲ್ಲಿ ಬರುವ ಅಡೆತಡೆಗಳನ್ನು ದೂರಮಾಡಿಕೊಳ್ಳುವುದು ನಮ್ಮ ಕೈಯಲ್ಲೇ ಇರುತ್ತದೆ. ಇದಕ್ಕೆ ಚಾಣಕ್ಯ ನೀತಿ ಬಹಳ ಉಪಯುಕ್ತವಾಗಿದೆ. ಚಾಣಕ್ಯರ ಪ್ರಕಾರ ಒಂದು ಸಂಸ್ಥೆಯ ಮುಂದಾಳತ್ವವ ವಹಿಸಿಕೊಳ್ಳಬೇಕಾದರೆ ಕೆಲವು ಗುಣಗಳನ್ನು ಹೊಂದಿರಬೇಕು. ಆಗ ಮಾತ್ರ ಆ ಸ್ಥಾನದಲ್ಲಿದ್ದು ಉತ್ತಮ ಆಡಳಿತಗಾರರಾಗಿ ಯಶಸ್ವಿಯ...