Bengaluru, ಮಾರ್ಚ್ 14 -- ಒಬ್ಬ ಶ್ರೀಮಂತ ವ್ಯಕ್ತಿಯು ಬಡತನದ ಬಲೆಗೆ ಬೀಳುತ್ತಾನೆಂದರೆ ಅದಕ್ಕೆ ಹಲವು ಕಾರಣಗಳಿರುತ್ತವೆ. ಕೆಲವು ವಿಷಯಗಳಿಗೆ ಗಮನ ಕೊಡದಿದ್ದರೆ ಶ್ರೀಮಂತ ವ್ಯಕ್ತಿಯೂ ಬಡವನಾಗುತ್ತಾನೆ ಎಂದು ಚಾಣಕ್ಯರು ಹೇಳುತ್ತಾರೆ. ಚಾಣಕ್ಯರು ತಮ್ಮ ನೀತಿ ಶಾಸ್ತ್ರದಲ್ಲಿ, ವ್ಯಕ್ತಿಯ ಸಂಪತ್ತಿನ ನಾಶಕ್ಕೆ ಕಾರಣವಾಗುವ ಕೆಲವು ಅಂಶಗಳನ್ನು ಅವರು ಉಲ್ಲೇಖಿಸಿದ್ದಾರೆ. ಕಷ್ಟಪಟ್ಟು ಗಳಿಸಿದ ಹಣವನ್ನು ಜೋಪಾನವಾಗಿ ಕಾಪಾಡಿಕೊಂಡು ಹೋಗುವುದು ಜಾಣತನ. ಆಚಾರ್ಯ ಚಾಣಕ್ಯರ ಪ್ರಕಾರ ಮನುಷ್ಯನು ಕೆಲವು ಗುಣಗಳನ್ನು ಹೊಂದಿರಲೇ ಬಾರದು. ಏಕೆಂದರೆ ಅದು ಸಂಪತ್ತಿನ ನಾಶಕ್ಕೆ ಕಾರಣವಾಗುತ್ತದೆ. ಹಣದ ಗಳಿಕೆಗೆ ಹಾಗೂ ಅದರ ನಿರ್ವಹಣೆಗೆ ಚಾಣಕ್ಯರ ಸಲಹೆಗಳು ಈ ರೀತಿಯಾಗಿದೆ.

ಚಾಣಕ್ಯರ ಪ್ರಕಾರ, ಅಧರ್ಮದ ಮಾರ್ಗವನ್ನು ಅನುಸರಿಸುವ ವ್ಯಕ್ತಿಗೆ ಎಂದಿಗೂ ಹಣವಿರುವುದಿಲ್ಲ. ತಪ್ಪು ದಾರಿಯಲ್ಲಿ ಹೆಚ್ಚು ಹಣ ಸಂಪಾದಿಸಲು ಪ್ರಾರಂಭಿಸಿದರೆ, ಅವರ ನಾಶ ಖಚಿತ ಎಂದು ತಿಳಿಯಿರಿ. ಅವರ ಬಳಿ ಹಣ ಹೆಚ್ಚು ಕಾಲ ಉಳಿಯುವುದಿಲ್ಲ.

ಚಾಣಕ್ಯರ ಪ್ರಕಾರ ಗಳಿಸಿದ ಹಣವ...