Bengaluru, ಮಾರ್ಚ್ 18 -- ಮಕ್ಕಳ ಜೀವನ ರೂಪಿಸುವಲ್ಲಿ ಪೋಷಕರು ಪ್ರಮುಖ ಪಾತ್ರ ವಹಿಸುತ್ತಾರೆ. ಪ್ರತಿಯೊಬ್ಬ ಪೋಷಕರಿಗೂ ತಮ್ಮ ಮಕ್ಕಳ ಬೆಳವಣಿಗೆ ಬಹಳ ಸಂತೋಷದ ವಿಷಯವಾಗಿರುತ್ತದೆ. ಮಕ್ಕಳು ಜೀವನದಲ್ಲಿ ಮಾಡಿದ ಸಾಧನೆಗಳನ್ನು ಪೋಷಕರು ತಮ್ಮದೇ ಎಂದು ಸಂಭ್ರಮಿಸುತ್ತಾರೆ. ಮಕ್ಕಳು ಮಹಾನ್ ವ್ಯಕ್ತಿಗಳಾಗಿ ಬೆಳೆಯುವುದನ್ನು ನೋಡುವುದಕ್ಕಿಂತ ಹೆಚ್ಚಿನ ಸಂತೋಷ ಇನ್ನೊಂದಿಲ್ಲ. ಆಚಾರ್ಯ ಚಾಣಕ್ಯರು ತಮ್ಮ ನೀತಿ ಶಾಸ್ತ್ರದಲ್ಲಿ ಇದೇ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಚಾಣಕ್ಯರ ಪ್ರಕಾರ, ಭವಿಷ್ಯದಲ್ಲಿ ಪೋಷಕರು ತಮ್ಮ ಸ್ವಂತ ಮಕ್ಕಳ ಶತ್ರುಗಳಾಗಬಹುದು. ಅದಕ್ಕೆ ಪೋಷಕರು ಮಾಡುವ ಎರಡು ಗಂಭೀರ ತಪ್ಪುಗಳು ಇಂತಹ ಸನ್ನಿವೇಶಗಳಿಗೆ ಕಾರಣವಾಗಬಹುದು. ಪೋಷಕರು ಮಾಡುವ ತಪ್ಪುಗಳಿಂದಾಗಿ ಮಕ್ಕಳು ದೊಡ್ಡವರಾದಾಗ ತಮ್ಮನ್ನು ಬೆಳೆಸಿದ ಪೋಷಕರನ್ನೇ ದೂಷಿಸುತ್ತಾರೆ. ಇದರಿಂದ ಪೋಷಕರು ಬಹಳ ನೊಂದುಕೊಳ್ಳುವಂತಾಗುತ್ತದೆ. ಹೀಗಾಗುವುದನ್ನು ತಪ್ಪಿಸಲು ಪೋಷಕರು ಮಕ್ಕಳನ್ನು ಬೆಳೆಸುವಾಗ ಕೆಲವು ವಿಷಯಗಳಲ್ಲಿ ಜಾಗ್ರತೆವಹಿಸಬೇಕು ಎಂದು ಹೇಳುತ್ತಾರೆ. ಹಾಗ...