Bengaluru, ಫೆಬ್ರವರಿ 21 -- ಆಚಾರ್ಯ ಚಾಣಕ್ಯರು ಭಾರತದ ಮಹಾನ್‌ ವಿದ್ವಾಂಸರಲ್ಲಿ ಒಬ್ಬರು. ಅವರು ತಮ್ಮ ಚಾಣಕ್ಯ ನೀತಿಯಿಂದ ಜನಪ್ರಿಯರಾಗಿದ್ದಾರೆ. ಅವರು ಜೀವನಕ್ಕೆ ಸಂಬಂಧಪಟ್ಟು ಬರೆದ ನೀತಿಗಳು ನೈತಿಕ ಗ್ರಂಥಗಳಲ್ಲಿ ಒಂದಾಗಿದೆ. ಅದು ಅಂದಿಗೂ-ಇಂದಿಗೂ ಜನಸಾಮಾನ್ಯರಿಗೆ ಸರಿಯಾಗಿ ಬದುಕುವ ಮಾರ್ಗವನ್ನು ಹೇಳುತ್ತದೆ. ಅವರ ನೀತಿಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಜೀವನದಲ್ಲಿ ಬರುವ ಅನೇಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ಚಾಣಕ್ಯರು ಹೇಳುವ ಪ್ರಕಾರ, ಕೆಲವರು ನಮ್ಮ ಎದುರಿಗೆ ನಮ್ಮನ್ನು ಅತಿಯಾಗಿ ಹೊಗಳುತ್ತಾರೆ. ಇಷ್ಟವಾಗುವಂತಹ ಮಾತುಗಳನ್ನು ಮಾತ್ರ ಆಡುತ್ತಾರೆ. ಆದರೆ ಅವರ ಮನಸ್ಸಿನಲ್ಲಿ ಬೇರೇನೋ ಉದ್ದೇಶ ಇರುತ್ತದೆ. ಆದ್ದರಿಂದ ಅಂತಹವರ ಬಗ್ಗೆ ಎಚ್ಚರದಿಂದಿರಬೇಕು. ಅವರು ನಿಮಗೆ ಸಹಾಯ ಮಾಡುವ ಬದಲಾಗಿ ನಿಮ್ಮ ಜೀವನದಲ್ಲಿ ಇನ್ನಷ್ಟು ಸಮಸ್ಯೆಗಳನ್ನು ನಿಮಗೆ ಅರಿವಿಲ್ಲದಂತೆ ಸೃಷ್ಟಿಸಬಹುದು. ಹಾಗಾದರೆ ಯಾವ ರೀತಿಯ ಜನರು ಸಿಹಿ ಮಾತುಗಳನ್ನಾಡಿ ನಿಮ್ಮನ್ನು ಕಷ್ಟದ ಬಲೆಗೆ ಬೀಳಿಸಬಹುದು ಇಲ್ಲಿದೆ ಓದಿ.

ಆಚಾರ್ಯ ಚಾಣಕ್ಯ...