Bengaluru, ಫೆಬ್ರವರಿ 14 -- ಆಚಾರ್ಯ ಚಾಣಕ್ಯರನ್ನು ಭಾರತದ ಅತ್ಯಂತ ಬುದ್ಧಿವಂತ ವ್ಯಕ್ತಿ ಎಂದು ಗುರುತಿಸಲಾಗುತ್ತದೆ. ಅವರು ಅಂದು ನೀತಿಶಾಸ್ತ್ರದಲ್ಲಿ ಹೇಳಿದ ವಿಚಾರಗಳನ್ನು ಇಂದಿಗೂ ಅನುಸರಿಸಲಾಗುತ್ತಿದೆ. ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ದೈನಂದಿನ ಜೀವನಕ್ಕೆ ಉಪಯುಕ್ತವಾಗಿರುವ ಅನೇಕ ಪಾಠಗಳನ್ನು ಹೇಳಿದ್ದಾರೆ. ಅವರು ನೀತಿಶಾಸ್ತ್ರದಲ್ಲಿ ತೃಪ್ತಿ, ಅತೃಪ್ತಿ ಹಾಗೂ ಅವಶ್ಯಕತೆಗಳ ಬಗ್ಗೆಯೂ ಹೇಳಿದ್ದಾರೆ. ಅಂದರೆ ಮನುಷ್ಯನು ಯಾವುದರಲ್ಲಿ ತೃಪ್ತಿಯನ್ನು ಕಾಣಬೇಕು ಹಾಗೂ ಯಾವುದರ ಬಗ್ಗೆ ಅತೃಪ್ತನಾಗಿರಬೇಕು ಎಂಬುದರ ಬಗ್ಗೆ ಸ್ಪಷ್ಟವಾಗಿ ಹೇಳಿದ್ದಾರೆ. ಪ್ರತಿಯೊಬ್ಬ ಮನುಷ್ಯನು ಜೀವನದಲ್ಲಿ ಯಾವುದಾದರೂ ಒಂದು ವಿಷಯಕ್ಕೆ ಅತೃಪ್ತಿಯನ್ನು ಅನುಭವಿಸುವುದು ನಿಜ. ಏಕೆಂದರೆ ಜೀವನದಲ್ಲಿ ಮುನ್ನಡೆಯಬೇಕು ಅಥವಾ ಉತ್ತಮ ಫಲಿತಾಂಶಗಳನ್ನು ಸಾಧಿಸಬೇಕಂದರೆ ಅತೃಪ್ತರಾಗಬೇಕು ಎಂದು ಚಾಣಕ್ಯರು ಹೇಳುತ್ತಾರೆ. ಅದೇ ಸಮಯದಲ್ಲಿ ಚಾಣಕ್ಯರು ಕೆಲವು ವಿಷಯಗಳಲ್ಲಿ ತೃಪ್ತಿಯನ್ನು ಸಹ ಹೊಂದಬೇಕು ಎಂದೂ ಹೇಳುತ್ತಾರೆ. ಆದರ್ಶ ಜೀವನ ನಡೆಸಲು ಕೆಲವು ...