Bengaluru, ಮಾರ್ಚ್ 25 -- ಆಚಾರ್ಯ ಚಾಣಕ್ಯರ ನೀತಿ ಶಾಸ್ತ್ರವು ಸಾಮಾನ್ಯ ಜನರಿಗೆ ಅಗತ್ಯವಿರುವ ತಿಳುವಳಿಕೆಯನ್ನು ನೀಡುವ ಮಹಾನ್‌ ಪುಸ್ತಕವಾಗಿದೆ. ಅದರಲ್ಲಿ ಚಾಣಕ್ಯರು ಜೀವನದಲ್ಲಿ ಎದುರಾಗಬಹುದಾದ ಸನ್ನಿವೇಶಗಳು ಮತ್ತು ಕಠಿಣ ಪರಿಸ್ಥಿಗಳಿಗೆ ಪರಿಹಾರಗಳನ್ನು ಉಲ್ಲೇಖಿಸಿದ್ದಾರೆ. ಸಂತೋಷ ಮತ್ತು ದುಃಖದಂತಹ ವಿಷಯಗಳಿಂದ ಮನಸ್ಸು ವಿಚಲಿತವಾಗುವುದನ್ನು ತಡೆಯಲು ಅವರು ಹಲವು ಉಪಾಯಗಳನ್ನು ಹೇಳಿದ್ದಾರೆ. ಚಾಣಕ್ಯರು ಜೀವನದ ಕೆಲವು ರಹಸ್ಯಗಳನ್ನು ವಿವರಿಸಿದ್ದಾರೆ. ಇವು ಒಬ್ಬ ವ್ಯಕ್ತಿಯು ತನ್ನ ಜೀವನವನ್ನು ಸುಲಭಗೊಳಿಸಲು ಸಹಾಯ ಮಾಡುತ್ತವೆ. ಯಶಸ್ಸು ಎಲ್ಲರಿಗೂ ಸುಲಭವಾಗಿ ಬರುವುದಿಲ್ಲ. ಆದರೆ ಕೆಲವು ವಿಷಯಗಳಿಗೆ ಹೆಚ್ಚಿನ ಮಹತ್ವ ನೀಡುವುದರಿಂದ ಅದೃಷ್ಟವಂತರಾಗಿ ಬಾಳಬಹುದಾಗಿದೆ.

ಜೀವನದಲ್ಲಿ ನೀವು ಮಾಡುವ ಸಣ್ಣ ಸಣ್ಣ ತಪ್ಪುಗಳು ಯಶಸ್ಸು ನಿಮ್ಮ ಕೈಗೆಟುಕದಂತೆ ಮಾಡಬಹುದು. ಜೀವನದಲ್ಲಿ ವೈಫಲ್ಯಗಳನ್ನು ಎದುರಿಸಬೇಕಾಗಬಹುದು. ಚಾಣಕ್ಯರು ಹೇಳುವ ಈ ವಿಷಯಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ಅದಕ್ಕೆ ಹೆಚ್ಚಿನ ಮಹತ್ವ ನೀಡುವುದರಿಂದ ನಿ...