Bengaluru, ಫೆಬ್ರವರಿ 25 -- ಆಚಾರ್ಯ ಚಾಣಕ್ಯರಿಗೆ ಕೇವಲ ಅರ್ಥಶಾಸ್ತ್ರ ಅಥವಾ ರಾಜಕೀಯ ವಿಷಯಗಳಷ್ಟೇ ಅಲ್ಲ ಸಮಾಜದ ಪ್ರತಿಯೊಂದು ಅಂಶದ ಬಗ್ಗೆಯೂ ಆಳವಾದ ಜ್ಞಾನವಿತ್ತು. ಆಚಾರ್ಯ ಚಾಣಕ್ಯರು ತಮ್ಮ ನೀತಿ ಶಾಸ್ತ್ರ ಹಾಗೂ ಸೂತ್ರಗಳ ಮೂಲಕ ಅನೇಕ ವಿಷಯಗಳನ್ನು ಹೇಳಿದ್ದಾರೆ. ಆ ಎಲ್ಲಾ ಸಲಹೆಗಳು ಪ್ರಾಯೋಗಿಕ ಜೀವನಕ್ಕೆ ಬಹಳ ಅಮೂಲ್ಯವೆಂದೆನಿಸಿದೆ. ಅವುಗಳನ್ನು ಸರಿಯಾಗಿ ಪಾಲಿಸುವುದರಿಂದ ಜೀವನದಲ್ಲಿ ಎಂದು ಸೋಲು ಎದುರಾಗುವುದಿಲ್ಲ ಎಂಬ ನಂಬಿಕೆಯಿದೆ. ಚಾಣಕ್ಯ ಸೂತ್ರದ ಪ್ರಕಾರ ಒಬ್ಬ ವ್ಯಕ್ತಿಯು ಇತರರನ್ನು ಸರಿಯಾಗಿ ನಿರ್ಣಯಿಸುವ ಸಾಮರ್ಥ್ಯವನ್ನು ಹೊಂದಿದ್ದರೆ ಅವನು ಜೀವನದಲ್ಲಿ ಎಂದಿಗೂ ಸೋಲನ್ನು ಕಾಣುವುದಿಲ್ಲ.

ಚಾಣಕ್ಯರ ನೀತಿಯ ಪ್ರಕಾರ ನಮ್ಮ ಸುತ್ತಲೂ ಹಾವು-ಚೇಳುಗಳಿಗಿಂತಲೂ ಅಪಾಯಕಾರಿ ಜನರಿದ್ದಾರೆ. ಆದ್ದರಿಂದ ಅಂತಹ ಜನರನ್ನು ಗುರುತಿಸುವ ಹಾಗೂ ಅವರಿಂದ ದೂರವಿರುವ ಸಾಮರ್ಥ್ಯವನ್ನು ಹೊಂದಿರಬೇಕು. ಅಷ್ಟೇ ಅಲ್ಲದೇ ಜೀವನದಲ್ಲಿ ಅಂತಹ ಜನರಿಂದ ಎಂದಿಗೂ ಸಹಾಯ ಪಡೆದುಕೊಳ್ಳಬಾರದು ಎಂದು ಹೇಳಿದ್ದಾರೆ. ಹಾಗಾದರೆ ನಾವು ಯಾರಿಂದ ಸಹಾ...