Bengaluru, ಫೆಬ್ರವರಿ 28 -- ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದ ರಚನೆಗಾಗಿ ಜಗತ್ಪ್ರಸಿದ್ಧಿಯನ್ನು ಪಡೆದವರು. ಅವರು ನೀತಿ ಶಾಸ್ತ್ರ, ಅರ್ಥಶಾಸ್ತ್ರ ಸೇರಿದಂತೆ ಹಲವಾರು ಪ್ರಮುಖ ಕೃತಿಗಳನ್ನು ರಚಿಸಿದ್ದಾರೆ. ಅವೆಲ್ಲವೂ ಜನಸಾಮಾನ್ಯರಿಗೆ ಉಪಯುಕ್ತವಾಗುವ ಮಾಹಿತಿ ಹಾಗೂ ಸಲಹೆಗಳನ್ನು ಒಳಗೊಂಡಿದೆ. ಇತಿಹಾಸಕಾರರು ಹಾಗೂ ಲಭ್ಯವಿರುವ ಪುರಾವೆಗಳ ಆಧಾರದ ಮೇರೆಗೆ ಹೇಳುವುದಾದರೆ ಚಾಣಕ್ಯರು ಕ್ರಿಪೂ 376 ರಲ್ಲಿ ಜನಿಸಿದ್ದರು. ಇತಿಹಾಸಕಾರರು ಹೇಳುವಂತೆ ಆಚಾರ್ಯ ಚಾಣಕ್ಯರು ರಾಜಕಾರಣಿ, ರಾಜತಾಂತ್ರಿಕ ಮತ್ತು ಮಹಾನ್‌ ವಿದ್ವಾಂಸರಾಗಿದ್ದರು. ಕೌಶಲ್ಯಪೂರ್ಣ ರಾಜಕೀಯ ತಂತ್ರಗಳಿಂದಲೇ ಅವರು ಮೌರ್ಯ ಸಾಮ್ರಾಜ್ಯದ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದರು. ಅವರು ಅಂದು ಬರೆದ ಚಿಂತನೆಗಳು ಇಂದಿಗೂ ಪ್ರಸ್ತುತವೆನಿಸಿದೆ. ನೀತಿ ನಿಯಮಗಳನ್ನು ಪಾಲಿಸುವ ವ್ಯಕ್ತಿ ಜೀವನದಲ್ಲಿ ಸುಲಭವಾಗಿ ಯಶಸ್ವಿಯಾಗಬಹುದು. ಚಾಣಕ್ಯರು ಹೇಳುವಂತೆ ಕೆಲವು ಜನರ ಜೊತೆ ಇದ್ದರೆ ಅದು ಸಾವಿಗೆ ಸಮೀಪವಿದ್ದಂತೆ. ಅವರು ಎಂದೂ ನಂಬಿಕೆಗೆ ಅರ್ಹರಾಗಿರುವುದಿಲ್ಲ. ಚಾಣಕ...