Bengaluru, ಮಾರ್ಚ್ 13 -- ಜೀವನದಲ್ಲಿ ತಪ್ಪು ಮಾಡದೇ ಇರುವವರು ಯಾರೂ ಇಲ್ಲ. ಪ್ರತಿಯೊಬ್ಬ ಮನುಷ್ಯನೂ ಒಂದಲ್ಲ ಒಂದು ಹಂತದಲ್ಲಿ ತಿಳಿದೋ ತಿಳಿಯದೆಯೋ ತಪ್ಪುಗಳನ್ನು ಮಾಡುತ್ತಾನೆ. ಆದರೆ ನೀವು ಅದನ್ನು ತಿಳಿದೋ ಅಥವಾ ತಿಳಿಯದೆಯೋ ಮಾಡಿದರೂ, ಅದು ತಪ್ಪೇ ಆಗಿರುತ್ತದೆ. ಅದರಲ್ಲಿ ಕೆಲವು ಕ್ಷಮಿಸಲಾಗದ ತಪ್ಪುಗಳೂ ಸೇರಿರುತ್ತವೆ. ಅಂತಹ ತಪ್ಪುಗಳನ್ನು ಪಾಪಗಳೆಂದು ಪರಿಗಣಿಸಲಾಗುತ್ತದೆ. ಈ ರೀತಿಯ ತಪ್ಪುಗಳನ್ನು ಮಾಡಿದ ಜನರನ್ನು ಪಾಪಿಗಳು ಎಂದು ಕರೆಯಲಾಗುತ್ತದೆ. ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಮಾನವರು ಮಾಡುವ ಪಾಪಗಳನ್ನು ವಿವರಿಸಿದ್ದಾರೆ. ಈ ಮೂಲಕ ಮಾನವರು ಮಾಡಲೇ ಬಾರದ ತಪ್ಪುಗಳ ಬಗ್ಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಆಚಾರ್ಯ ಚಾಣಕ್ಯರು ತಮ್ಮ ನೀತಿ ಶಾಸ್ತ್ರದಲ್ಲಿ ಚರ್ಚಿಸುವ ಅನೇಕ ವಿಷಯಗಳಲ್ಲಿ ಇದೂ ಒಂದಾಗಿದೆ. ಕ್ಷಮಿಸಲಾರದಂತಹ ತಪ್ಪುಗಳನ್ನು ಪಾಪಗಳು ಎಂದು ಚಾಣಕ್ಯರು ಹೇಳುತ್ತಾರೆ. ಮಾನವರು ಮಾಡುವ ಅತ್ಯಂತ ದೊಡ್ಡ ಪಾಪ ಯಾವುದು ಎಂದು ಅವರು ಈ ರೀತಿಯಾಗಿ ವಿವರಿಸುತ್ತಾರೆ.

ಆಚಾರ್ಯ ಚಾಣಕ್ಯರ ಪ್ರಕಾರ, ಪೋ...