Bengaluru, ಏಪ್ರಿಲ್ 6 -- ಆಚಾರ್ಯ ಚಾಣಕ್ಯರನ್ನು ಅಸಾಧಾರಣ ಬುದ್ಧಿಜೀವಿ ಎಂದು ಹೇಳಲಾಗುತ್ತದೆ. ಅವರು ನಿಜ ಜೀವನದಲ್ಲಿ ಬರುವ ಎಲ್ಲಾ ರೀತಿಯ ಸಮಸ್ಯೆಗಳಿಗೆ ಪರಿಹಾರಗಳನ್ನು ತೋರಿಸಬಲ್ಲರು ಎಂದು ಹೇಳಲಾಗುತ್ತದೆ. ಭಾರತದ ಇತಿಹಾಸದ ಅನೇಕ ಮಹಾನ್ ವಿದ್ವಾಂಸರುಗಳಲ್ಲಿ ಚಾಣಕ್ಯರು ಒಬ್ಬರು. ಇಂದಿಗೂ ಜನರಲ್ಲಿ ಅವರ ಮೌಲ್ಯ ಹಾಗೆಯೇ ಇದೆ. ಜನರು ಇನ್ನೂ ಅವರು ಹೇಳಿದ ನೀತಿ ಪಾಠ ಹಾಗೂ ಬೋಧನೆಗಳನ್ನು ಅನುಸರಿಸುತ್ತಾರೆ. ಜೀವನದ ಪ್ರತಿಯೊಂದು ಅಂಶಗಳ ಬಗ್ಗೆ ಅವರಿಗೆ ಅದ್ಭುತ ಜ್ಞಾನವಿತ್ತು. ಆ ಜ್ಞಾನವನ್ನು ಅವರು ಪುಸ್ತಕದ ರೂಪದಲ್ಲಿ ಹಂಚಿಕೊಂಡರು ಎಂದು ಹೇಳಲಾಗುತ್ತದೆ. ಅವುಗಳನ್ನೇ ಚಾಣಕ್ಯ ನೀತಿ ಎಂದು ಕರೆಯಲಾಗುತ್ತದೆ. ಚಾಣಕ್ಯರು ತಮ್ಮ ನೀತಿ ಶಾಸ್ತ್ರದಲ್ಲಿ ವ್ಯಕ್ತಿಯೊಬ್ಬನು ಜೀವನದಲ್ಲಿ ಶ್ರೀಮಂತನಾಗಿ ಬಾಳಲು ಅವನು ಚಿಕ್ಕ ವಯಸ್ಸಿನಲ್ಲಿಯೇ ರೂಢಿಸಿಕೊಂಡ ಕೆಲವು ಅಭ್ಯಾಸಗಳೇ ಕಾರಣವಾಗಿದೆ ಎಂದು ಹೇಳುತ್ತಾರೆ. ಅದು ಆ ವ್ಯಕ್ತಿ ದೊಡ್ಡವನಾದ ಮೇಲೆ ಅವನನ್ನು ಯಶಸ್ಸಿನ ಉತ್ತಂಗವನ್ನು ತಲುಪುವಂತೆ ಮಾಡುತ್ತದೆ. ಅದರಿಂದ ಆ ವ್ಯಕ್ತಿ ಹಣ...