ಭಾರತ, ಜನವರಿ 29 -- ಯಾವುದೇ ಒಬ್ಬ ವ್ಯಕ್ತಿ ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ ಅಥವಾ ವಿಫಲನಾಗಿದ್ದರೆ ಆತನಲ್ಲಿರುವ ಕೆಲವು ಅಭ್ಯಾಸಗಳು ಪ್ರಮುಖ ಕಾರಣವಾಗಿರುತ್ತವೆ. ಯಶಸ್ವಿ ವ್ಯಕ್ತಿಯ ಆಲೋಚನೆ ಯಾವಾಗಲೂ ವಿಫಲ ವ್ಯಕ್ತಿಯ ಆಲೋಚನೆಗಿಂತ ಭಿನ್ನವಾಗಿರುತ್ತದೆ. ಅದರ ಆಧಾರದ ಮೇಲೆ ಅವನು ಸುಲಭವಾಗಿ ಹೋರಾಟಗಳ ಹಾದಿಯನ್ನು ದಾಟುತ್ತಾನೆ ಮತ್ತು ಪ್ರಗತಿಯ ಏಣಿಯನ್ನು ಏರುತ್ತಾನೆ. ಆದರೆ ನಾವು ಒಬ್ಬ ವ್ಯಕ್ತಿಯನ್ನು ಯಶಸ್ವಿಗೊಳಿಸುವ ಅಭ್ಯಾಸಗಳ ಬಗ್ಗೆ ಹೇಳುತ್ತಿಲ್ಲ, ಒಬ್ಬ ವ್ಯಕ್ತಿ ವಿಫಲವಾಗುವುದಕ್ಕೆ ಕಾರಣವಾಗುವ ಕೆಲವು ಅಭ್ಯಾಸಗಳ ಬಗ್ಗೆ ಇಲ್ಲಿ ವಿವರಿಸಲಾಗುತ್ತಿದೆ. ಇದು ತಿಳಿದೋ ಅಥವಾ ತಿಳಿಯದೆಯೋ ಪ್ರಗತಿಯ ಹಾದಿಯಿಂದ ಬೇರೆಡೆಗೆ ತಿರುಗಿಸುವಂತಹ ಅಭ್ಯಾಸಗಳು. ಚಾಣಕ್ಯ ನೀತಿಯ ಪ್ರಕಾರ ಒಬ್ಬ ವ್ಯಕ್ತಿಯನ್ನು ವಿಫಲಗೊಳಿಸುವ ಮತ್ತು ಅವನನ್ನು ದುಃಖ ಹಾಗೂ ವಿನಾಶದ ಹಾದಿಗೆ ಕರೆದೊಯ್ಯುವ 5 ಕೆಟ್ಟ ಅಭ್ಯಾಸಗಳು ಯಾವುವು ಎಂದು ತಿಳಿಯೋಣ. ಯಶಸ್ಸನ್ನು ಬಯಸುವ ಪ್ರತಿಯೊಬ್ಬ ವ್ಯಕ್ತಿಯು ಈ ಅಭ್ಯಾಸಗಳನ್ನು ಗುರುತಿಸಿದ ಕೂಡಲೇ ಅವುಗಳಿಂದ...