ಭಾರತ, ಫೆಬ್ರವರಿ 16 -- ಆಚಾರ್ಯ ಚಾಣಕ್ಯರನ್ನು ಅರ್ಥಶಾಸ್ತ್ರ ಮತ್ತು ನೀತಿಶಾಸ್ತ್ರದ ಪಿತಾಮಹ ಎಂದು ಕರೆಯಲಾಗುತ್ತದೆ. ಅವರು ಬರೆದ ಚಾಣಕ್ಯ ನೀತಿ ಬಹಳ ಜನಪ್ರಿಯವಾಗಿದೆ. ಚಾಣಕ್ಯರ ಅರ್ಥಶಾಸ್ತ್ರವಂತೂ ಅನೇಕ ಭಾಷೆಗಳಲ್ಲಿ ಅನುವಾದಗೊಂಡಿದೆ. ಚಾಣಕ್ಯರು ತಮ್ಮ ನೀತಿ ಪುಸ್ತಕದಲ್ಲಿ ಮಾನವನ ಜೀವನವನ್ನು ಸರಳ ಮತ್ತು ಯಶಸ್ವಿಯಾಗಿಸಲು ಹಲವು ಸಲಹೆಗಳನ್ನು ನೀಡಿದ್ದಾರೆ. ನೀವು ಆ ವಿಷಯಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿಯೂ ಅದು ನಿಮಗೆ ದಾರಿದೀಪವಾಗುತ್ತದೆ. ಯಶಸ್ಸಿನ ಬಾಗಿಲು ತೆರೆಯುವಂತೆ ಮಾಡುತ್ತದೆ.

ಚಾಣಕ್ಯರು ನೀತಿ ಶಾಸ್ತ್ರದಲ್ಲಿ ಮನುಷ್ಯನ ಗುಣಸ್ವಭಾವ ಹಾಗೂ ನಡವಳಿಕೆ ಹೇಗಿರಬೇಕೆಂದು ಹೇಳಿದ್ದಾರೆ. ಮನುಷ್ಯನು ಎಲ್ಲರೊಂದಿಗೆ ಒಟ್ಟಾಗಿ‌ ಬಾಳಬೇಕೆಂದರೆ ಅವನು ಕೆಲವು ವಿಷಯಗಳನ್ನು ಚೆನ್ನಾಗಿ ಅರಿತಿರಬೇಕು. ಬೇರೆಯವರಿಗೆ ನೋವನ್ನುಂಟು ಮಾಡುವಂತಹ ಸ್ವಭಾವವನ್ನು ಬೆಳೆಸಿಕೊಳ್ಳಬಾರದು. ಅದರಲ್ಲಿ ಪ್ರಮಖವೆಂದರೆ ಮಾತು. ಮಾತು ಮನುಷ್ಯನಿಗೆ ಬಹಳ ಮುಖ್ಯ. ಮಾತಿನ ಮೂಲಕವೇ ಸಂಬಂಧ, ವ್ಯವಹಾರಗಳು...