Bengaluru, ಫೆಬ್ರವರಿ 8 -- ಭಾರತದ ಇತಿಹಾಸದಲ್ಲಿ ಆಚಾರ್ಯ ಚಾಣಕ್ಯರು ಒಬ್ಬ ಮಹಾನ್ ತತ್ವಜ್ಞಾನಿ ಮತ್ತು ಅರ್ಥಶಾಸ್ತ್ರಜ್ಞರಾಗಿದ್ದರು. ಅವರು ಚಾಣಕ್ಯ ನೀತಿ ಮತ್ತು ಅರ್ಥಶಾಸ್ತ್ರದಂತಹ ಪ್ರಮುಖ ಪುಸ್ತಕಗಳನ್ನು ಬರೆದಿದ್ದಾರೆ. ಅವರು ತಮ್ಮ ಚಾಣಕ್ಯ ನೀತಿಯಲ್ಲಿ, ಕೆಟ್ಟ ಸಮಯದಲ್ಲಿ ಸಹಾಯ ಮಾಡುವ ಕೆಲವು ವಿಷಯಗಳನ್ನು ಉಲ್ಲೇಖಿಸಿದ್ದಾರೆ. ಜೀವನದಲ್ಲಿ ಬರುವ ಯಾವುದೇ ಸನ್ನಿವೇಶವನ್ನು ಎದುರಿಸಲು ಸಿದ್ಧರಾಗಿರಬೇಕು ಎಂದು ಅವರು ಹೇಳಿದ್ದಾರೆ. ಕೆಟ್ಟ ಸನ್ನಿವೇಶಗಳಿಗೆ ನಿಮ್ಮನ್ನು ಹೇಗೆ ಸಿದ್ಧಪಡಿಸಿಕೊಳ್ಳಬೇಕೆಂದನ್ನು ಅವರು ವಿವರವಾಗಿ ಮತ್ತು ಕೆಲವು ಸೂತ್ರಗಳ ಮೂಲಕ ಉಲ್ಲೇಖಿಸಿದ್ದಾರೆ. ಕೆಲವು ವಿಷಯಗಳನ್ನು ಅನುಸರಿಸಿದರೆ ಶತ್ರುಗಳು ಎಷ್ಟೇ ದೊಡ್ಡವರಾಗಿದ್ದರೂ ಅವರನ್ನು ಸೋಲಿಸಬಹುದು ಎಂಬುದು ಅವರು ನಮಗೆ ನೀಡಿರುವ ಸಂದೇಶವಾಗಿದೆ.

ಯಾವಾಗಲೂ ಭಯವೇ ನಮ್ಮನ್ನು ದುರ್ಬಲಗೊಳಿಸುತ್ತದೆ. ಅದೇ ರೀತಿ ಸಂದರ್ಭಗಳು ನಮ್ಮನ್ನು ಆಳುತ್ತವೆ. ಭಯಭೀತ ವ್ಯಕ್ತಿಗಿಂತ ಆತ್ಮವಿಶ್ವಾಸ ಹೊಂದಿರುವ ವ್ಯಕ್ತಿಯು ಪರಿಸ್ಥಿತಿಯನ್ನು ಜಯಿಸುವ ಸಾಧ್ಯತೆ ಹ...