ಭಾರತ, ಜನವರಿ 28 -- Chanakya Niti: ಇತಿಹಾಸದಲ್ಲಿ ಅನೇಕ ಮಹಾನ್ ವಿದ್ವಾಂಸರು ಬಂದು ಹೋಗಿದ್ದಾರೆ. ಈಗಲೂ ಕೆಲವರು ಇದ್ದಾರೆ. ಇವರ ಅನುಭವದ ಮಾತುಗಳು, ಸಂದೇಶಗಳು ಇಂದಿನಗೂ ಪ್ರಸ್ತುತ ಎನಿಸುತ್ತವೆ. ಹಿಂದೆ ಇದ್ದ ವಿದ್ವಾಂಸರ ಪೈಕಿ ಮಹಾನ್ ರಾಜತಾಂತ್ರಿಕ ಆಚಾರ್ಯ ಚಾಣಕ್ಯ ಅವರು ತಮ್ಮ ನೀತಿಗಳಲ್ಲಿ ಜೀವನದ ಪ್ರತಿಯೊಂದು ಅಂಶದ ಬಗ್ಗೆ ತಮ್ಮ ಸ್ಪಷ್ಟ ದೃಷ್ಟಿಕೋನಗಳನ್ನು ನೀಡಿದ್ದಾರೆ. ಆಚಾರ್ಯರ ನೀತಿಗಳನ್ನು ಇಂದಿಗೂ ಜನರು ತಮ್ಮ ಜೀವನದಲ್ಲಿ ಕಾರ್ಯಗತಗೊಳಿಸಿ ಅದರ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಆಚಾರ್ಯ ಚಾಣಕ್ಯನು ತನ್ನ ನೀತಿಗಳಲ್ಲಿ ಜೀವನದಲ್ಲಿ ಯಶಸ್ಸು ಪಡೆಯಬೇಕಾದರೆ ಒಬ್ಬ ಮನುಷ್ಯನಲ್ಲಿ ಏನೆಲ್ಲಾ ಗುಣಗಳಿರಬೇಕು, ಯಾವ ನಿಮಯಗಳನ್ನು ಪಾಲಿಸಬೇಕೆಂಬುದನ್ನು ತಿಳಿಸಿಕೊಟ್ಟಿದ್ದಾರೆ.

ಚಾಣಕ್ಯರ ನೀತಿಗಳು ಯಾವಾಗಲೂ ನಮಗೆ ಸ್ಪೂರ್ತಿ ನೀಡುತ್ತದೆ. ಅವರ ನೀತಿಗಳು ಕೇವಲ ರಾಜಕೀಯ ಮತ್ತು ಸಮಾಜಕ್ಕೆ ಸಂಬಂಧಿಸಿಲ್ಲ. ಜೀವನದ ಪ್ರತಿಯೊಂದು ಅಂಶವನ್ನು ಸುಧಾರಿಸಲು ಮಾರ್ಗದರ್ಶನ ನೀಡುತ್ತವೆ. ಚಾಣಕ್ಯನ ಪ್ರಮುಖ ನೀತಿಗಳನ್ನು ತಿಳಿ...