ಭಾರತ, ಫೆಬ್ರವರಿ 15 -- ಆಚಾರ್ಯ ಚಾಣಕ್ಯರು ಕೌಟಿಲ್ಯ ಎಂದು ಪ್ರಸಿದ್ಧಿಯನ್ನು ಪಡೆದವರು. ಚಾಣಕ್ಯರ ಮಾತುಗಳನ್ನು ಅನುಸರಿಸಿ ಮಗಧದ ರಾಜ ಚಂದ್ರುಗುಪ್ತನು ಮೌರ್ಯ ಸಾಮ್ರಾಜ್ಯವನ್ನು ಸ್ಥಾಪಿಸಿದನು. ಚಾಣಕ್ಯರು ಅಸಾಮಾನ್ಯ ಬುದ್ಧಿವಂತರು. ಸಕಲ ಶಾಸ್ತ್ರ ಪಾರಂಗತರಾಗಿದ್ದರು. ಚಾಣಕ್ಯರ ನೀತಿಶಾಸ್ತ್ರವು ಪ್ರಪಂಚದಾದ್ಯಂತ ಪ್ರಸಿದ್ಧಿಯನ್ನು ಪಡೆದಿದೆ. ಸಮಾಜದಲ್ಲಿ ಬದುಕಲು ಮತ್ತು ಯಶಸ್ಸುಗಳಿಸಲು ಅನೇಕ ಸಲಹೆಗಳನ್ನು ನೀಡಿದ್ದಾರೆ. ಅವುಗಳನ್ನು ಇಂದಿಗೂ ಪಾಲಿಸಲಾಗುತ್ತಿದೆ. ಚಾಣಕ್ಯರು ಹೇಳಿರುವ ನೀತಿಯನ್ನು ಅನುಸರಿಸಿದರೆ ಯಶಸ್ಸು ಖಂಡಿತ ಸಿಗುತ್ತದೆ ಎನ್ನುವುದು ಬಹಳಷ್ಟು ಜನರ ನಂಬಿಕೆ. ಚಾಣಕ್ಯರ ಪ್ರಕಾರ ಕೆಲವರು ಜೀವನದುದ್ದಕ್ಕೂ ಬಡವರಾಗಿಯೇ ಇರುತ್ತಾರೆ. ಕಾರಣ ಇಷ್ಟೇ, ಯಾವ ವ್ಯಕ್ತಿ ಕೆಲಸಕ್ಕೆ ಮಹತ್ವವನ್ನು ಕೊಡುವುದಿಲ್ಲವೋ ಅವನು ಎಂದಿಗೂ ಪ್ರಗತಿಯನ್ನು ಸಾಧಿಸಲಾರ. ಅದೇ ರೀತಿ ತಪ್ಪು ಸ್ಥಳಗಳಲ್ಲಿ ವಾಸಿಸುವ ವ್ಯಕ್ತಿಯು ಸಹ ಅವನ ಜೀವನದಲ್ಲಿ ಪ್ರಗತಿ ಅಥವಾ ಯಶಸ್ಸನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಚಾಣಕ್ಯರು ಹೇಳುತ್ತಾರೆ. ಹಾ...