Bengaluru, ಏಪ್ರಿಲ್ 8 -- ಕೆಟ್ಟ ಕೆಲಸಗಳು ಕೆಟ್ಟ ಫಲಿತಾಂಶಗಳನ್ನು ತರುತ್ತವೆ. ಆದರೆ ಕೆಲವೊಮ್ಮೆ ಒಳ್ಳೆಯದನ್ನು ಮಾಡಿಯೂ ಕೂಡಾ ಕೆಟ್ಟ ಫಲಿತಾಂಶಗಳನ್ನು ಎದುರಿಸಬೇಕಾಗುತ್ತದೆ. ಆಚಾರ್ಯ ಚಾಣಕ್ಯರ ನೀತಿಶಾಸ್ತ್ರವೂ ಅದನ್ನೇ ಹೇಳುತ್ತದೆ. ವಾಸ್ತವವಾಗಿ ನೈತಿಕತೆಯನ್ನು ಉಳಿಸಿಕೊಂಡು ಜೀವನದಲ್ಲಿ ಯಶಸ್ಸು ಸಾಧಿಸಲು ಚಾಣಕ್ಯ ನೀತಿಯಲ್ಲಿನ ಅನೇಕ ಪಾಠಗಳು ನಮಗೆ ನೆರವಾಗುತ್ತವೆ. ಅವರ ನೀತಿ ಪಾಠಗಳಲ್ಲಿ ವ್ಯಕ್ತಿಯ ನಡವಳಿಕೆ ಹಾಗೂ ಜೀವನಶೈಲಿಯ ಬಗ್ಗೆ ಪ್ರತಿಯೊಂದು ಸಣ್ಣ ವಿಷಯವನ್ನು ಒಳಗೊಂಡಿದೆ. ಅದರಲ್ಲಿ ಅವರು ಇತರರಿಗೆ ಸಲಹೆ ನೀಡುವುದರ ಬಗ್ಗೆಯೂ ಹೇಳಿದ್ದಾರೆ. ಚಾಣಕ್ಯರ ಪ್ರಕಾರ ನೀವು ನಿಮ್ಮ ಜೀವನದಲ್ಲಿ ಎಂದಿಗೂ ಸೋಲು ಎದುರಿಸಬಾರದು ಎಂದಾದರೆ, ಯಾವುದೇ ಸಂದರ್ಭದಲ್ಲೂ ಈ 5 ಜನರಿಗೆ ಸಲಹೆ ನೀಡಬಾರದು. ಹಾಗಾದರೆ ಆ ಐದು ಜನರು ಯಾರು ಎಂದು ನೋಡೋಣ.

ಆಚಾರ್ಯ ಚಾಣಕ್ಯರು ಮೊದಲನೆಯದಾಗಿ ಮೂರ್ಖರಿಗೆ ಸಲಹೆ ನೀಡಬಾರದು ಎಂದು ಹೇಳುತ್ತಾರೆ. ಏಕೆಂದರೆ ಮೂರ್ಖ ಜನರು ನಿಮ್ಮ ಮಾತುಗಳ ಆಳ, ಅರ್ಥ ಹಾಗೂ ಒಳ್ಳೆಯತನವನ್ನು ಅರ್ಥಮಾಡಿಕೊಳ್ಳಲು ಸ...