Bengaluru, ಏಪ್ರಿಲ್ 13 -- Chanakya Niti: ನಾವೀಗ ಡಿಜಿಟಲ್‌ ಯುಗದಲ್ಲಿದ್ದೇವೆ. ಜನರ ಜೀವನಶೈಲಿ ಬದಲಾಗಿದೆ. ಆದರೂ ಯಶಸ್ಸು ಕಾಣಲು ಹೆಚ್ಚಿನ ಜನರು ಚಾಣಕ್ಯ ನೀತಿಯನ್ನೇ ಅನುಸರಿಸುತ್ತಾರೆ. ಭಾರತ ಕಂಡ ಅತ್ಯಂತ ಬುದ್ಧಿಜೀವಿಗಳಲ್ಲಿ ಆಚಾರ್ಯ ಚಾಣಕ್ಯರು ಒಬ್ಬರು. ಅವರ ಬಗ್ಗೆ ತಿಳಿಯದವರು ಯಾರೂ ಇಲ್ಲ. ಚಾಣಕ್ಯ ನೀತಿಯಲ್ಲಿ ತೋರಿಸಿರುವ ಮಾರ್ಗವನ್ನು ಅನುಸರಿಸುವ ಮೂಲಕ ತಮ್ಮ ಜೀವನವನ್ನು ಸಂತೋಷದಿಂದ ನಡೆಸಲು ಪ್ರಯತ್ನಿಸುತ್ತಾರೆ. ಚಾಣಕ್ಯರು ನೀತಿ ಶಾಸ್ತ್ರದಲ್ಲಿ ವಿಭಿನ್ನ ವಿಷಯಗಳು, ಗುಣಗಳು ಹಾಗೂ ಜನರಲ್ಲಿರುವ ನ್ಯೂನತೆಗಳನ್ನು ಪಟ್ಟಿ ಮಾಡಿ ಉಲ್ಲೇಖಿಸಿದ್ದಾರೆ. ಜೀವನದಲ್ಲಿ ಈ ಎರಡು ವಿಷಯಗಳ ಬಗ್ಗೆ ಭಯಪಡುವ ಅಥವಾ ಹಿಂಜರಿಯುವ ವ್ಯಕ್ತಿ ಎಂದಿಗೂ ಯಶಸ್ವಿಯಾಗಲು ಸಾಧ್ಯವಿಲ್ಲ ಎಂದು ಚಾಣಕ್ಯರು ಹೇಳುತ್ತಾರೆ.

ಜೀವನದ ಪ್ರತಿಯೊಂದು ವಿಷಯಗಳಿಗೆ ಹೆದರುವ ವ್ಯಕ್ತಿ ಸಾಧನೆಯ ಹಾದಿಯಲ್ಲಿ ಎಡವಿ ಬೀಳುವುದೇ ಹೆಚ್ಚು. ಭಯದ ಕಾರಣದಿಂದ ಮಾಡಿದ ಕೆಲಸಗಳೆಲ್ಲವೂ ಅಸ್ತವ್ಯಸ್ತವಾಗುತ್ತದೆ. ಸರಿಯಾದ ನಿರ್ಧಾರವನ್ನು ಸಹ ಅವನು ತೆಗೆದುಕೊಳ್ಳ...