Bengaluru, ಮಾರ್ಚ್ 6 -- ಮನುಷ್ಯನು ತನ್ನ ಜೀವನದಲ್ಲಿ ಕೆಲವರನ್ನು ತನ್ನ ರಕ್ತಸಂಬಂಧಿಗಳು, ಅತ್ಯಾಪ್ತರು ಎಂದು ಪರಿಗಣಿಸಬೇಕು. ಆಗ ಮಾತ್ರ ಅವನು ಸಂತೋಷದಿಂದಿರಲು ಸಾಧ್ಯ. ಆ ಬಂಧುಗಳು ವ್ಯಕ್ತಿಯ ಅತ್ಯಂತ ಕಠಿಣ ಸಮಯದಲ್ಲಿ ಸಹಾಯಕ್ಕೆ ಬರುತ್ತಾರೆ. ಕಷ್ಟದ ದಿನಗಳಿಂದ ಹೊರಬರಲು ಸಹಾಯ ಮಾಡುತ್ತಾರೆ. ಆಚಾರ್ಯ ಚಾಣಕ್ಯರು ಪ್ರತಿಯೊಬ್ಬರ ಜೀವನದಲ್ಲೂ ಆರು ಜನ ಬಂಧುಗಳಿರಬೇಕು ಎಂದು ಹೇಳುತ್ತಾರೆ. ನೀತಿ ಶಾಸ್ತ್ರವನ್ನು ಬರೆದು, ಚಾಣಕ್ಯರ ಜನಸಾಮಾನ್ಯರಿಗೆ ಸುಲಭದಿಂದ ಜೀವನ ನಡೆಸಲು ಮಾರ್ಗದರ್ಶನ ನೀಡಿದ್ದಾರೆ. ಅವುಗಳನ್ನು ಸರಿಯಾಗಿ ಪಾಲಿಸಿದರೆ ಖಂಡಿತ ಜೀವನದಲ್ಲಿ ಸುಖ ಸಂತೋಷಗಳು ದೊರೆಯುತ್ತವೆ. ಆಚಾರ್ಯ ಚಾಣಕ್ಯರ ಪ್ರಕಾರ ನೀವು ಯಾರನ್ನು ಬಂಧುಗಳನ್ನಾಗಿ ಮಾಡಿಕೊಳ್ಳಬೇಕು ಎಂದು ನೋಡೋಣ.

1. ಸತ್ಯವು ತಾಯಿಯಂತೆ: ಸತ್ಯ ಯಾವಾಗಲೂ ಒಂಟಿಯಾಗಿರುತ್ತದೆ ಎಂದು ಹೇಳಲಾಗುತ್ತದೆ. ಒಮ್ಮೆ ಸತ್ಯ ಹೊರಬಂದರೆ, ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ಸತ್ಯವನ್ನು ಮಾತನಾಡುವ ವ್ಯಕ್ತಿಗೆ ಭಯಪಡುವ ಅಗತ್ಯವಿಲ್ಲ. ಒಂದು ಸಣ್ಣ ಸುಳ್ಳನ್ನು ಹೇಳಿದರೆ ಅದ...