Bengaluru, ಫೆಬ್ರವರಿ 18 -- ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಜೀವನದ ಹಲವು ವಿಷಯಗಳನ್ನು ವಿವರಿಸಿದ್ದಾರೆ. ಮನುಷ್ಯರು ಕುಟುಂಬದಲ್ಲಿ ಹಾಗೂ ಸಮಾಜದಲ್ಲಿ ಹೇಗೆ ಬಾಳಬೇಕು ಎನ್ನುವ ಬಗ್ಗೆಯೂ ಅವರ ಉಪದೇಶಗಳಲ್ಲಿ ವಿವರವಿದೆ. ಮನುಷ್ಯನಿಗೆ ನಡತೆ ಬಹಳ ಮುಖ್ಯ. ನಡೆ-ನುಡಿಗಳಿಂದಲೇ ಎಲ್ಲರನ್ನು ಮೆಚ್ಚಿಸಬಹುದು. ಉತ್ತಮ ನಡೆ-ನುಡಿಯಿರುವವರನ್ನು ಎಲ್ಲರೂ ಇಷ್ಟಪಡುತ್ತಾರೆ. ಅಂಥವರು ಜೀವನದಲ್ಲಿ ಉತ್ತಮ ಸಾಧನೆಯನ್ನು ಮಾಡುತ್ತಾರೆ. ಆದರೆ ಆಚಾರ್ಯ ಚಾಣಕ್ಯರು ಹೇಳುವಂತೆ ಕೆಲವು ಜನರನ್ನು ಹೊರಗಿನ ಜನರಷ್ಟೇ ಅಲ್ಲ ಸ್ವಂತ ಕುಟುಂಬದವರೂ ಸಹ ತ್ಯಜಿಸುತ್ತಾರೆ. ಅವರನ್ನು ಎಂದಿಗೂ ನಂಬುವುದಿಲ್ಲ. ಏಕೆಂದರೆ ಅವರು ನಂಬಿಕೆಗೆ ಅರ್ಹರಾಗಿರುವುದಿಲ್ಲ. ಚಾಣಕ್ಯರು ತಮ್ಮ ಒಂದು ನೀತಿಯಲ್ಲಿ ಅಂತಹ ಜನರು ಯಾರು? ಅವರ ಯಾವ ದುರ್ಗುಣ ಅವರನ್ನು ಅವರ ಸ್ವಂತ ಕುಟುಂಬದಿಂದ ದೂರಮಾಡುತ್ತದೆ ಎಂಬುದನ್ನು ಹೀಗೆ ವಿವರಿಸಿದ್ದಾರೆ.

ಈ ಶ್ಲೋಕದ ಅರ್ಥ ಹೀಗಿದೆ, ತನ್ನ ಸ್ವಂತ ಕುಟುಂಬಕ್ಕೆ ವಿಶ್ವಾಸಘಾತ ಬಗೆದ ವ್ಯಕ್ತಿಯನ್ನು ಅವನ ಮಕ್ಕಳು, ಪತ್ನಿ ಹಾಗ...