नई दिल्ली, ಫೆಬ್ರವರಿ 6 -- ಚಾಣಕ್ಯ ನೀತಿ: ಇತಿಹಾಸವನ್ನು ನೋಡಿದಾಗ ಅನೇಕ ಮಹಾನ್ ವಿದ್ವಾಂಸರು ಬಂದು ಹೋಗಿದ್ದಾರೆ. ಈಗಲೂ ಕೆಲವರು ಇದ್ದಾರೆ. ಇವರ ಅನುಭವದ ಮಾತುಗಳು, ಸಂದೇಶಗಳು ಇಂದಿನಗೂ ಪ್ರಸ್ತುತ ಎನಿಸುತ್ತವೆ. ಈ ವಿದ್ವಾಂಸರ ಪೈಕಿ ಮಹಾನ್ ರಾಜತಾಂತ್ರಿಕ ಆಚಾರ್ಯ ಚಾಣಕ್ಯ ಅವರು ತಮ್ಮ ನೀತಿಗಳಲ್ಲಿ ಜೀವನದ ಪ್ರತಿಯೊಂದು ಅಂಶದ ಬಗ್ಗೆ ತಮ್ಮ ಸ್ಪಷ್ಟ ದೃಷ್ಟಿಕೋನಗಳನ್ನು ನೀಡಿದ್ದಾರೆ. ಆಚಾರ್ಯರ ನೀತಿಗಳನ್ನು ಇಂದಿಗೂ ಜನರು ತಮ್ಮ ಜೀವನದಲ್ಲಿ ಕಾರ್ಯಗತಗೊಳಿಸಿ ಅದರ ಪ್ರಯೋಜನವನ್ನು ಪಡೆಯುತ್ತಿದ್ದಾರೆ.

ಆಚಾರ್ಯ ಚಾಣಕ್ಯನ ನೀತಿಗಳಲ್ಲಿ ಯಶಸ್ಸಿನ ರಹಸ್ಯಗಳು ಅಡಗಿವೆ. ತಾಯಿಯನ್ನು ಗೌರವಿಸುವ ವ್ಯಕ್ತಿಯು ಜೀವನದಲ್ಲಿ ಎಂದಿಗೂ ವಿಫಲವಾಗಲು ಸಾಧ್ಯವಿಲ್ಲ ಚಾಣ್ಯರು ಹೇಳಿದ್ದಾರೆ. ಆಚಾರ್ಯ ಚಾಣಕ್ಯನ ಪ್ರಕಾರ, ಜನ್ಮ ನೀಡುವ ತಾಯಿಯನ್ನು ಹೊರತುಪಡಿಸಿ, ತಾಯಿಯನ್ನು ಹೋಲುವ ನಾಲ್ಕು ಮಹಿಳೆಯರು ಇದ್ದಾರೆ. ಈ ಮಹಿಳೆಯರನ್ನು ಯಾವಾಗಲೂ ಗೌರವಿಸಬೇಕು. ಯಾರು ಅವರೆಲ್ಲಾ ಎಂಬುದನ್ನು ತಿಳಿಯೋಣ, ಯಾವ ಮಹಿಳೆಯರಿಗೆ ತಾಯಂದಿರಷ್ಟೇ ಸ್ಥಾನಮಾನವನ...