ಭಾರತ, ಮಾರ್ಚ್ 2 -- ಚಂದನವನದ ಸ್ಟಾರ್ ನಿರೂಪಕಿ ಚೈತ್ರಾ ವಾಸುದೇವನ್ ಜಗದೀಪ್‌ ಅವರನ್ನು ಇಂದು (ಮಾ 2) ವರಿಸಿದ್ದಾರೆ.

ಜಗದೀಪ್ ಅವರನ್ನು ಪ್ರೀತಿಸಿ ಚೈತ್ರಾ ವಾಸುದೇವನ್ ಮದುವೆಯಾಗಿದ್ದಾರೆ. ಈ ಹಿಂದೆಯೇ ಜಗದೀಪ್ ಅವರನ್ನು ಚೈತ್ರಾ ಪರಿಚಯಿಸಿದ್ದರು.

2023ರಲ್ಲಿ ತಮ್ಮ ಮೊದಲ ಪತಿಯಿಂದ ದೂರವಾದ ಚೈತ್ರಾ ಇದೀಗ ತಮ್ಮ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ.

ಸೀರೆಯಲ್ಲಿ ಹರಳಿನ ಆಭರಣಗಳನ್ನು ತೊಟ್ಟು ತುಂಬಾ ಸುಂದರವಾಗಿ ಇಂದಿನ ಮದುಮಗಳು ಚೈತ್ರಾ ವಾಸುದೇವನ್ ಮಿಂಚಿದ್ದಾರೆ,

ಮದುವೆಯಲ್ಲಿ ಹಿರಿತೆರೆಯ ಹಾಗೂ ಕಿರುತೆರೆಯ ನಟ, ನಟಿಯರು ಭಾಗಿಯಾಗಿದ್ದರು.

ಮದರಂಗಿ ಕಾರ್ಯಕ್ರಮವನ್ನೂ ತುಂಬಾ ಜೋರಾಗಿಯೇ ಸೆಲೆಬ್ರೇಟ್‌ ಮಾಡಿಕೊಂಡಿದ್ದ ಚೈತ್ರಾ ಇಂದು ಜಗದೀಪ್‌ ಜತೆ ಸಪ್ತಪದಿ ತುಳಿದಿದ್ದಾರೆ,

ಸಾಮಾಜಿಕ ಜಾಲತಾಣದಲ್ಲಿ ಮದುವೆಯ ಸಣ್ಣ ವಿಡಿಯೋ ತುಣುಕನ್ನು ಚೈತ್ರಾ ವಾಸುದೇವನ್ ಹಂಚಿಕೊಂಡಿದ್ದಾರೆ.

ಮದುವೆಯ ಅತ್ಯಮೂಲ್ಯ ಕ್ಷಣಗಳನ್ನು ಆ ವಿಡಿಯೋದಲ್ಲಿ ಸೆರೆಹಿಡಿಯಲಾಗಿದೆ. ಅವರ ಅಭಿಮಾನಿಗಳು ಹೊಸ ಜೀವನಕ್ಕೆ ಶುಭಾಶಯ ಕೋರಿದ್ದಾರೆ,

Publ...