Bengaluru, ಏಪ್ರಿಲ್ 12 -- Chaitra Purnima 2025: ಇಂದು (ಏಪ್ರಿಲ್ 12, ಶನಿವಾರ) ಚೈತ್ರ ಪೂರ್ಣಿಮಾವನ್ನು ಆಚರಿಸಲಾಗುತ್ತಿದೆ. ಪ್ರತಿ ವರ್ಷ ಚಾಂದ್ರಮಾನ ಮಾಸದ ಶುಕ್ಲ ಪಕ್ಷದ ಕೊನೆಯ ದಿನದಂದು ಚೈತ್ರ ಹುಣ್ಣಿಮೆ ಅಥವಾ ಚೈತ್ರ ಪೂರ್ಣಿಮಾವನ್ನು ಆಚರಿಸುತ್ತಾರೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಇದು ವರ್ಷದ ಮೊದಲ ಹುಣ್ಣಿಮೆಯಾಗಿದೆ. ಇದು ಯುಗಾದಿ ಮತ್ತು ಗುಡಿ ಪಾಡ್ಯದ ನಂತರ ಬರುತ್ತದೆ. ಪ್ರತಿ ಹುಣ್ಣಿಮೆ ದಿನದಂದು ಏನಾದರೂ ಒಂದು ವಿಶೇಷ ಇರುತ್ತದೆ. ಅದರಂದೆ ಈ ಬಾರಿಯ ಹುಣ್ಣಿಮೆಯಂದು ಹನುಮ ಜಂಯತಿ ಇದೆ. ಹೀಗಾಗಿ ಈ ಚೈತ್ರ ಹುಣ್ಣಿಮೆಗೆ ತುಂಬಾ ಮಹತ್ವವಿದೆ.

ಪೂರ್ಣಿಮೆಯ ತಿಥಿಯು ಏಪ್ರಿಲ್ 12ರ ತಡರಾತ್ರಿ 3.21ಕ್ಕೆ ಆರಂಭವಾಗುತ್ತದೆ. ನಂತರ ಏಪ್ರಿಲ್ 13ರ ಬೆಳಿಗ್ಗೆ 5.51ಕ್ಕೆ ಕೊನೆಗೊಳ್ಳುತ್ತದೆ. ಹೀಗಾಗಿ ಚೈತ್ರ ಪೂರ್ಣಿಮಾವನ್ನು ಏಪ್ರಿಲ್ 12ರ ಶನಿವಾರ ಆಚರಿಸಲಾಗುತ್ತದೆ. ಇನ್ನು ಈ ದಿನ ಬ್ರಹ್ಮ ಮುಹೂರ್ತವನ್ನು ನೋಡುವುದಾದರೆ ಏಪ್ರಿಲ್ 12ರ ಬೆಳಗ್ಗೆ 4.29 ರಿಂದ 5.14ಕ್ಕೆ ಬ್ರಹ್ಮ ಮುಹೂರ್ತ ಇದೆ. ಮಧ್ಯಾಹ್ನ 2....