ಭಾರತ, ಮಾರ್ಚ್ 5 -- ಬೆಂಗಳೂರಿನ ಅರಮನೆ ಮೈದಾನದ ಚಾಮರ ವಜ್ರದಲ್ಲಿ ಇತ್ತೀಚೆಗೆ ಬಿಗ್‌ಬಾಸ್‌ ಕನ್ನಡ ಸೀಸನ್‌ 7ರ ಸ್ಪರ್ಧಿ ಚೈತ್ರಾ ವಾಸುದೇವನ್‌ ಶುಭವಿವಾಹ ಕಾರ್ಯಕ್ರಮ ವೈಭವದಿಂದ ನಡೆದಿತ್ತು. ಮರುದಿನ ಬೆಂಗಳೂರಿನ ಉದ್ಯಮಿ ಸತ್ಯ ನಾಯ್ಡು ವಿವಾಹ ನಡೆದಿದೆ. ಇದರಲ್ಲಿ ಏನು ವಿಶೇಷ ಅಂತಿರಾ? ಇವರಿಬ್ಬರು ಈ ಹಿಂದೆ ಗಂಡಹೆಂಡತಿಯಾಗಿದ್ದು. ವೈಯಕ್ತಿಕ ಕಾರಣಗಳಿಂದ ಇಬ್ಬರೂ ಡಿವೋರ್ಸ್‌ ಆಗಿದ್ದರು. ಇದೀಗ ಇವರಿಬ್ಬರೂ ಒಂದೇ ದಿನದ ಅಂತರದಲ್ಲಿ ಬೇರೆ ಸಂಗಾತಿಯ ಜತೆ ಮದುವೆಯಾಗಿದ್ದಾರೆ. ಇವೆಂಟ್‌ಫ್ಯಾಕ್ಟರಿ ಎಂಬ ಇವೆಂಟ್‌ ಮ್ಯಾನೇಜ್‌ಮೆಂಟ್‌ ಕಾರ್ಯಕ್ರಮ ನಡೆಸಿಕೊಡುವ ಕಂಪನಿ ಹೊಂದಿರುವ ಉದ್ಯಮಿ ಸತ್ಯ ನಾಯ್ಡು ಅವರ ಈ ಮರು ಮದುವೆ ಇವೆಂಟ್‌ ಪ್ಲ್ಯಾನಿಂಗ್‌ ಮಾತ್ರ ಸಖತ್‌ ಆಗಿದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ಚೈತ್ರಾ ವಾಸುದೇವನ್‌ ಮತ್ತು ಸತ್ಯ ನಾಯ್ಡು ಎರಡೂ ಕುಟುಂಬಗಳು ಮೊದಲೇ ಯೋಜಿಸಿದಂತೆ ಈ ಎರಡು ಮದುವೆಗಳು ಒಂದೇ ಸ್ಥಳದಲ್ಲಿ ಮತ್ತು ಒಂದು ದಿನದ ಆಸುಪಾಸಿನಲ್ಲಿ ನಡೆದಿರುವುದೇ ಎಂದು ಖಚಿತವಾಗಿಲ್ಲ. ಸತ್ಯ ನಾಯ್ಡು ...