Bengaluru, ಏಪ್ರಿಲ್ 5 -- ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ತನಿಖೆ ಮತ್ತು ಆರೋಪಿಗಳ ಪತ್ತೆಗೆ ಹೆಚ್ಚು ಸಹಕಾರಿಯಾಗುತ್ತಿರುವುದು ಸಿಸಿಟಿವಿ ಕ್ಯಾಮೆರಾಗಳು. ಅದರಲ್ಲೂ ಉದ್ಯೋಗ, ಶಿಕ್ಷಣ, ಉದ್ಯಮ ಹೀಗೆ ಹಲವು ಉದ್ದೇಶಕ್ಕೆ ಕೆಲವೊಮ್ಮೆ ಮನೆಯಿಂದ ದೂರ ಇರಬೇಕಾದ ಪರಿಸ್ಥಿತಿ ಇರುತ್ತದೆ. ಅಂತಹ ಸಂದರ್ಭದಲ್ಲಿ ಮನೆಯ ರಕ್ಷಣೆಗೆ ಎಷ್ಟು ಕಾಳಜಿ ವಹಿಸಿದರೂ, ಯಾವ ಕ್ರಮ ವಹಿಸಿದರೂ ಸಾಲದು ಎನ್ನುವ ಪರಿಸ್ಥಿತಿ ಇಂದಿನ ದಿನಗಳಲ್ಲಿದೆ. ಬಹುತೇಕ ಪ್ರಕರಣಗಳಲ್ಲಿ ಸಿಸಿಟಿವಿ ಸಾಕ್ಷ್ಯವೇ ಪ್ರಮುಖ ಅಂಶವಾಗಿದೆ. ಅಪರಾಧ ಪ್ರಕರಣ ಪತ್ತೆಗೆ ನೆರವಾಗುವುದು ಮಾತ್ರವಲ್ಲ, ನಮ್ಮ ಸುರಕ್ಷತೆ ಮತ್ತು ಜಾಗೃತೆಗಾಗಿ ಸಿಸಿಟಿವಿ ಎನ್ನುವುದು ಇಂದು ಅಗತ್ಯವಾಗಿದೆ. ಹಾಗಿರುವಾಗ ಮನೆ, ಆಫೀಸ್‌ ಅಥವಾ ಇನ್ನಿತರ ಉದ್ದೇಶಕ್ಕೆ ಸಿಸಿಟಿವಿ ಅಳವಡಿಸುವುದಿದ್ದರೆ, ಈ ಅಂಶಗಳನ್ನು ನೀವು ಗಮನಿಸಲೇಬೇಕು.

ಇಂದಿನ ಜಗತ್ತಿನಲ್ಲಿ, ನಮ್ಮ ಮನೆಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ಎಂದಿಗಿಂತಲೂ ಹೆಚ್ಚು ಮುಖ್ಯವಾಗಿದೆ. ಭದ್ರತಾ ಕಾಳಜಿಗಳು ...