ಭಾರತ, ಫೆಬ್ರವರಿ 9 -- ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನ 11ನೇ ಸೀಸನ್‌ನಲ್ಲಿ ಕರ್ನಾಟಕ ಬುಲ್ಡೋಜರ್ಸ್‌ ತಂಡ ಶುಭಾರಂಭ ಮಾಡಿದೆ. ತೆಲುಗು ವಾರಿಯರ್ಸ್‌ ವಿರುದ್ಧದ ಪಂದ್ಯದಲ್ಲಿ ಕಿಚ್ಚ ಸುದೀಪ್‌ ನೇತೃತ್ವದ ತಂಡ 46 ರನ್‌ಗಳಿಂದ ಜಯಭೇರಿ ಬಾರಿಸಿದೆ. ಟಾಸ್ ಗೆದ್ದ ತೆಲುಗು ತಂಡದ ನಾಯಕ ಅಖಿಲ್ ಅಕ್ಕಿನೇನಿ, ಕರ್ನಾಟಕ ಬುಲ್ಡೋಜರ್ಸ್ ತಂಡವನ್ನು ಮೊದಲು ಬ್ಯಾಟಿಂಗ್‌ಗೆ ಇಳಿಸಿದರು. ನಾಲ್ಕು ಬಾರಿ ಟೂರ್ನಿಯನ್ನು ಗೆದ್ದಿರುವ ತೆಲುಗು ವಾರಿಯರ್ಸ್ ವಿರುದ್ಧ ಈ ಬಾರಿ ಕಿಚ್ಚ ಸುದೀಪ್ ನಾಯಕತ್ವದ ಕರ್ನಾಟಕ ಬುಲ್ಡೋಜರ್ಸ್ ಪ್ರಬಲ ಪ್ರದರ್ಶನ ನೀಡಿತು. ಎರಡೂ ತಂಡಗಳ ಆಟಗಾರರು ಪ್ರೇಕ್ಷಕರಿಗೆ ಮನರಂಜನೆಯ ರಸದೂಟ ಬಡಿಸಿದರು.

ತೆಲುಗು ವಾರಿಯರ್ಸ್ ಟಾಸ್‌ ಗೆದ್ದಾಗ ಮಾಡಿಕೊಂಡ ಆಯ್ಕೆ ಉತ್ತಮವಾಗಿಯೇ ಇತ್ತು. ಈ ಹಿಂದಿನ ಪಂದ್ಯಗಳಲ್ಲಿ ತೆಲುಗು ವಾರಿಯರ್ಸ್ ಗೆಲುವು ತಮ್ಮದಾಗಿಸಿಕೊಂಡಿದ್ದ ಕಾರಣ, ಈ ಬಾರಿಯೂ ಇದೇ ತಂಡ ಗೆಲ್ಲಬಹುದು ಎಂಬ ನಿರೀಕ್ಷೆ ಕೂಡ ಹಲವರಲ್ಲಿತ್ತು. ಆದರೆ ಕೊನೆಗೆ ಗೆದ್ದಿದ್ದು ಕಿಚ್ಚ ಸುದೀಪ್ ನಾಯಕತ್ವದ ಕರ್ನಾಟಕ ಬುಲ್ಡೋಜರ್...