New Delhi, ಫೆಬ್ರವರಿ 26 -- CBSE New Rule: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಇ) ಹೊಸ ನಿಯಮಗಳನ್ನು ಪರಿಚಯಿಸಿದ್ದು, ಈಗಾಗಲೇ ಮಂಡಳಿಯೊಂದಿಗೆ ಸಂಯೋಜಿತವಾಗಿರುವ ಶಾಲೆಗಳಿಗೆ ಬಾಲವಾಟಿಕಾ (ಬಾಲವಾಡಿ)ದಿಂದ 5ನೇ ತರಗತಿ ತನಕದ ಶಾಖಾ ಶಾಲೆಗಳನ್ನು ಸ್ಥಾಪಿಸಲು ಅವಕಾಶ ನೀಡಿದೆ. ಇದರೊಂದಿಗೆ ಶಾಲೆಗಳ ಸ್ಥಳಾವಕಾಶದ ಸಮಸ್ಯೆಗೆ ಪರಿಹಾರ ನೀಡಲು ಮುಂದಾಗಿದೆ. ಅಫಿಲಿಯೇಷನ್ ಬೈ ಲಾ (ಬ್ರಾಂಚ್ ಸ್ಕೂಲ್) -2025ರ ಪ್ರಕಾರ, ಸಿಬಿಎಸ್‌ಇ ಮಂಡಳಿ ಜತೆಗೆ ಅಫಿಲಿಯೇಟ್ ಆಘಿರುವ ಶಾಲೆಗಳು ಶಾಖಾ ಶಾಲೆ ಸ್ಥಾಪಿಸುವುದಕ್ಕೆ ಅರ್ಜಿಗಳನ್ನು ಸಿಬಿಎಸ್‌ಇ ಆಹ್ವಾನಿಸಿದೆ. ಮುಖ್ಯ ಶಾಲೆ ಇರುವ ನಗರದಲ್ಲೇ ಶಾಖಾ ಶಾಲೆಗಳನ್ನು ಸ್ಥಾಪಿಸಬಹುದು. ಇದು ಮುಂದಿನ ಶೈಕ್ಷಣಿಕ ವರ್ಷ (2026-27)ದಿಂದ ಜಾರಿಗೆ ಬರಲಿದೆ.

ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020ರ ಪ್ರಕಾರ, ಸಿಬಿಎಸ್‌ಇಯಲ್ಲಿ ಕಲ್ಪಿಸಿರುವಂತೆ ಆಟ ಆಧಾರಿತ ಕಲಿಕೆಯ ಮೇಲೆ ಕೇಂದ್ರೀಕರಿಸುವ ಮೂಲಕ ಔಪಚಾರಿಕ ಶಾಲಾ ಶಿಕ್ಷಣಕ್ಕಾಗಿ 3 ರಿಂದ 6 ವರ್ಷದೊಳಗಿನ ಮಕ್ಕಳನ್ನು ಅಣಿಗ...