Delhi, ಫೆಬ್ರವರಿ 15 -- CBSE Exams 2025: 2024- 25 ನೇ ಸಾಲಿನ ಸಿಬಿಎಸ್ಸಿ ಪರೀಕ್ಷೆಗಳು ಶನಿವಾರದಿಂದ ಆರಂಭವಾಗಲಿವೆ. ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್ಇ) 2024-25ರ ಶೈಕ್ಷಣಿಕ ವರ್ಷದ 10 ಮತ್ತು 12 ನೇ ತರಗತಿ ಬೋರ್ಡ್ ಪರೀಕ್ಷೆಗಳನ್ನು ಫೆಬ್ರವರಿ 15 ರಂದು ಪ್ರಾರಂಭಿಸಲಿದ್ದು, 42 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಹಾಜರಾಗಲಿದ್ದಾರೆ. ಸಿಬಿಎಸ್ಇ ಬೋರ್ಡ್ ಪರೀಕ್ಷೆಗಳು ಭಾರತದಾದ್ಯಂತ 7,842 ಕೇಂದ್ರಗಳಲ್ಲಿ ಮತ್ತು ವಿಶ್ವದಾದ್ಯಂತ 26 ದೇಶಗಳಲ್ಲಿ ನಡೆಯಲಿವೆ. ಇದಕ್ಕಾಗಿ ಭಾರತದ ಪ್ರಮುಖ ನಗರಗಳು, ಕರ್ನಾಟಕದ ಹಲವು ಕೇಂದ್ರಗಳಲ್ಲಿಯೂ ಸಿದ್ದತೆ ಮಾಡಿಕೊಳ್ಳಲಾಗಿದೆ. ಯಾವುದೇ ಲೋಪಕ್ಕೆ ಅವಕಾಶ ಮಾಡಿಕೊಡದೇ ಕಟ್ಟುನಿಟ್ಟಾಗಿ ಪರೀಕ್ಷೆಗಳನ್ನು ನಡೆಸಲು ಮಂಡಳಿ ಮುನ್ನೆಚ್ಚರಿಕೆಯನ್ನು ವಹಿಸಿದೆ

Published by HT Digital Content Services with permission from HT Kannada....