ಭಾರತ, ಮಾರ್ಚ್ 30 -- CBSE 2025-26 Syllabus: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್‌ (ಸಿಬಿಎಸ್‌ಇ) ಹೊಸ ಶೈಕ್ಷಣಿಕ ವರ್ಷ ಅಂದರೆ 2025-26ಕ್ಕೆ ಅನ್ವಯವಾಗುವಂತೆ ತನ್ನ 9, 10 ಮತ್ತು 11, 12ನೇ ತರಗತಿಯ ಹೊಸ ಸಿಲೆಬೆಸ್ ಅನ್ನು ಪ್ರಕಟಿಸಿದೆ. ಸಿಬಿಎಸ್‌ಇ 10 ಮತ್ತು 12ನೇ ತರಗತಿಯ ಹೊಸ ಪಠ್ಯಕ್ರಮದ ವಿವರ ಅಧಿಕೃತ ವೆಬ್‌ಸೈಟ್ (cbse.gov.in) ಲಭ್ಯವಿದೆ. ಈ ವರದಿಯ ಕೊನೆಗೆ ಸಿಲೆಬೆಸ್ (The CBSE 10th and 12th new syllabus 2025-26 PDF) ಅನ್ನು ನೇರವಾಗಿ ಡೌನ್‌ಲೋಡ್ ಮಾಡುವುದಕ್ಕೆ ಅಗತ್ಯ ಲಿಂಕ್ ನೀಡಲಾಗಿದೆ.

ಸಿಬಿಎಸ್‌ಇ ಪ್ರಕಟಿಸಿರುವ 10 ಮತ್ತು 12ನೇ ತರಗತಿ ಸಿಲೆಬೆಸ್‌ನ ಪಿಡಿಎಫ್‌ನಲ್ಲಿ ಮಾರ್ಗಸೂಚಿ, ಪಠ್ಯಕ್ರಮ ಮತ್ತು ಕಲಿಕಾ ಫಲಗಳ ಕುರಿತಾದ ಸಮಗ್ರ ಮಾಹಿತಿ ಇದೆ. ಈ ಪರಿಷ್ಕರಣೆಗಳು ಕಲಿಕೆಯ ಫಲಿತಾಂಶಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿವೆ. ವಿದ್ಯಾರ್ಥಿಗಳಿಗೆ ತಮ್ಮ ಶೈಕ್ಷಣಿಕ ಕೌಶಲ್ಯಗಳನ್ನು ಪರಿಷ್ಕರಿಸಲು ಹೊಸ ಅವಕಾಶಗಳನ್ನು ನೀಡುತ್ತದೆ. ಹೊಸ ಮಾರ್ಗಸೂಚಿಗಳು ಶಿಕ್ಷಣ ವ್ಯವಸ್ಥೆಯನ್ನು ಸ...