Bengaluru, ಫೆಬ್ರವರಿ 18 -- Cassandra 2025 Netflix Series Review: ಜರ್ಮನಿಯ ಮೊದಲ ಸ್ಮಾರ್ಟ್‌ ಹೋಂ ಎಂದು ಖ್ಯಾತಿ ಪಡೆದ 1970ರಲ್ಲಿ ನಿರ್ಮಿಸಲಾದ ಈಗ ಯಾರೂ ವಾಸಿಸದ ಮನೆಗೆ ಕುಟುಂಬವೊಂದು ಬಾಡಿಗೆಗೆ ಬರುತ್ತದೆ. ಈ ಮನೆ ಸಂಪೂರ್ಣವಾಗಿ ಸ್ಮಾರ್ಟ್‌ಹೋಂ ಆಗಿದ್ದು, ಸ್ವಯಂಚಾಲಿತ ಫೀಚರ್‌ಗಳನ್ನು ಹೊಂದಿದೆ. ಅಲ್ಲಿ ಮುಚ್ಚಿಟ್ಟಿದ್ದ ಕಸ್ಸಂದ್ರ ( ಕಸ್ಸಂಡ್ರಾ/ಕ್ಯಾಸಂಡ್ರಾ ಎಂದೂ ಓದಬಹುದು) ಎಂಬ ರೋಬೋಟ್‌ ರೀತಿಯ (ತಲೆ ಟಿವಿಯಂತೆ ಇರುತ್ತದೆ, ಅದರಲ್ಲಿ ಮಹಿಳೆಯೊಬ್ಬಳ ಫೋಟೋ ಇದೆ, ಆಕೆ ಮನೆಯವರಲ್ಲಿ ಮಾತನಾಡುತ್ತಾಳೆ) ಎಐ ಮಾಯಾವಿಯನ್ನು ಕೊಂಚ ರಿಪೇರಿ ಮಾಡುತ್ತಾರೆ. ಇದರಿಂದ ಆ ಎಐ ಮಾಯಾವಿ ಚಾಲು ಆಗುತ್ತದೆ. ಎಲ್ಲರಿಗೂ ಮನೆಯಲ್ಲಿ ಒಂದು ಪರ್ಸನಲ್‌ ಅಸಿಸ್ಟೆಂಟ್‌ ಇರುವುದು ಖುಷಿ ಕೊಡುತ್ತದೆ. ಆದರೆ, ಒಂದು ದಿನದಲ್ಲಿಯೇ ಆ ಎಐ ನಿಗೂಢವಾಗಿ ವರ್ತಿಸಲು ಆರಂಭಿಸುತ್ತದೆ. ಆರಂಭದಲ್ಲಿ ಮನೆಯ ಮಹಿಳೆಗೆ ಮಾತ್ರ ಇದರ ಭಯಾನಕ ಮುಖ ಕಾಣಿಸುತ್ತದೆ. ಇತರರು ಯಾರೂ ಈಕೆಯ ಮಾತುಗಳನ್ನು ನಂಬಲು ರೆಡಿ ಇರುವುದಿಲ್ಲ. ಹೀಗೆ, ಕೆಲವೇ ಕೆಲವು ಸ...