ಭಾರತ, ಮಾರ್ಚ್ 19 -- Car Price Hike: 2025ರಲ್ಲಿ ಟಾಟಾ ಮೋಟಾರ್ಸ್ ಎರಡನೇ ಬಾರಿಗೆ ಎಲೆಕ್ಟ್ರಿಕ್ ವಾಹನಗಳು ಸೇರಿದಂತೆ ತನ್ನ ಶ್ರೇಣಿಯಲ್ಲಿರುವ ಎಲ್ಲಾ ಕಾರುಗಳ ಬೆಲೆಗಳನ್ನು ಹೆಚ್ಚಿಸುವುದಾಗಿ ಘೋಷಿಸಿದೆ. ಕಂಪನಿಯು ಈಗಾಗಲೇ ತನ್ನ ಪೋರ್ಟ್‌ಫೋಲಿಯೊದಲ್ಲಿನ ಕಾರುಗಳ ಬೆಲೆಯನ್ನು ಶೇ 3 ರಷ್ಟು ಹೆಚ್ಚಿಸಿದೆ. ಆದರೆ, ಏಪ್ರಿಲ್‌ನಿಂದ ಕಾರುಗಳ ಬೆಲೆಯನ್ನು ಇನ್ನಷ್ಟು ಹೆಚ್ಚಿಸುವುದಾಗಿ ಘೋಷಿಸಿದೆ. ಯಾವ ಮಾದರಿಯ ಕಾರಿನ ಮೇಲೆ ಎಷ್ಟು ದರ ಹೆಚ್ಚಳವಾಗಲಿದೆ ಎಂಬುದು ಸ್ಪಷ್ಟವಾಗಿಲ್ಲವಾದರೂ, ಬೆಲೆ ಹೆಚ್ಚಳವು ಮಾದರಿ ಮತ್ತು ರೂಪಾಂತರವನ್ನು ಅವಲಂಬಿಸಿರುತ್ತದೆ ಎಂದು ಕಂಪನಿ ಹೇಳಿದೆ.

ಇದಕ್ಕೂ ಮೊದಲು, ಭಾರತದ ಪ್ರಮುಖ ಕಾರು ತಯಾರಕ ಮಾರುತಿ ಸುಜುಕಿ ಇಂಡಿಯಾ ಕೂಡ ಏಪ್ರಿಲ್‌ನಿಂದ ಕಾರುಗಳ‌ ಬೆಲೆ ಏರಿಕೆ ಮಾಡುವುದಾಗಿ ಘೋಷಿಸಿತು. ಮಾರುತಿ ಸುಜುಕಿ 2025ರ ಜನವರಿಯಲ್ಲಿ ಒಮ್ಮೆ ಮತ್ತು ಫೆಬ್ರವರಿಯಲ್ಲಿ ಮತ್ತೊಮ್ಮೆ ಬೆಲೆಗಳನ್ನು ಹೆಚ್ಚಿಸಿತು. ಈಗ ಮತ್ತೊಮ್ಮೆ, ಮಾರುತಿ ಸುಜುಕಿ ಕಾರುಗಳ ಬೆಲೆಗಳು ಒಂದರಿಂದ ನಾಲ್ಕು ಪ್ರತಿಶತದಷ್ಟು ಹೆಚ್...