Bengaluru, ಮಾರ್ಚ್ 16 -- ಪೌಷ್ಠಿಕಾಂಶದಲ್ಲಿ ಹಾಲು ಬಹಳ ಮುಖ್ಯ ಎಂದು ನಮಗೆ ಬಹಳ ಹಿಂದಿನಿಂದಲೂ ತಿಳಿದಿದೆ. ಹಾಲು ಕುಡಿಯುವುದರಿಂದ ಮೂಳೆಗಳು ಆರೋಗ್ಯಕರವಾಗಿರುತ್ತವೆ. ಅಲ್ಲದೆ ಇದು ದೈಹಿಕವಾಗಿ ಬಲಪಡಿಸುತ್ತದೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಪ್ರತಿಯೊಬ್ಬರೂ ದಿನಕ್ಕೆ ಒಮ್ಮೆಯಾದರೂ ಒಂದು ಲೋಟ ಹಾಲು ಕುಡಿಯುವ ಅಭ್ಯಾಸವನ್ನು ಮಾಡಿಕೊಳ್ಳಬೇಕು. ಏಕೆಂದರೆ ಹಾಲಿನಲ್ಲಿರುವ ಕ್ಯಾಲ್ಸಿಯಂ ಮೂಳೆ ಸಾಂದ್ರತೆಯನ್ನು ಹೆಚ್ಚಿಸುತ್ತದೆ ಮತ್ತು ವ್ಯಕ್ತಿಯು ದುರ್ಬಲವಾಗದಂತೆ ಸಹಾಯ ಮಾಡುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಆದರೆ ಕೆಲವರು ಹಾಲು ಕುಡಿಯಲು ಅಥವಾ ಹಾಲಿನಿಂದ ಮಾಡಿದ ಆಹಾರವನ್ನು ತಿನ್ನಲು ಹಿಂಜರಿಯುತ್ತಾರೆ. ಇದು ಕೆಲವರಿಗೆ ಹೊಟ್ಟೆಯಲ್ಲಿ ಅಲರ್ಜಿ ಮತ್ತು ಅಜೀರ್ಣ ಉಂಟಾಗಬಹುದು. ಹೀಗಾಗಿ ಅಂತಹವರು ಕ್ಯಾಲ್ಸಿಯಂಗಾಗಿ ಏನು ತಿನ್ನಬೇಕು ಎಂಬುದರ ಬಗ್ಗೆ ಯೋಚಿಸುವುದು ಸಹಜ. ನೀವು ಕೂಡ ಹಾಲು ಕುಡಿಯದಿದ್ದರೆ ದೇಹಕ್ಕೆ ಕ್ಯಾಲ್ಸಿಯಂ ಪಡೆಯ ಈ ಹಣ್ಣುಗಳನ್ನು ತಿನ್ನಬಹುದು. ಮೂಳೆಯ ಆರೋಗ್ಯಕ್ಕೆ ಸಹಾಯ ಮಾಡುವ ಕ್ಯಾಲ್ಸ...