Delhi, ಫೆಬ್ರವರಿ 1 -- Budgets History: ವಿಶ್ವದಲ್ಲಿಯೇ ಪ್ರಮುಖ ಆರ್ಥಿಕತೆಯ ಜತೆಗೆ ಪ್ರಗತಿಯ ಹಾದಿಯಲ್ಲಿರುವ ಭಾರತದ ಜೀವಾಳವೇ ಆರ್ಥಿಕತೆ. ಅದರ ಹಿಂದೆ ಇರುವ ಲೆಕ್ಕಾಚಾರವೇ ಬಜೆಟ್‌. ಭಾರತದಲ್ಲಿ ಸ್ವಾತಂತ್ರ್ಯ ಬಂದಾಗಿನಿಂದಲೂ ಆಯವ್ಯಯ ಮಂಡನೆ ಪ್ರತಿ ವರ್ಷ ನಡೆದುಕೊಂಡು ಬಂದಿದೆ. ಪ್ರಧಾನಿಯಾದವರೂ ಬಜೆಟ್‌ ಮಂಡಿಸಿದ ಉದಾಹರಣೆಯಿದೆ. ಅತಿ ಹೆಚ್ಚು ಬಾರಿ ಬಜೆಟ್‌ ಮಂಡಿಸಿದವರೂ ಇದ್ದಾರೆ. ಒಂದು ಬಾರಿ ಬಜೆಟ್‌ ಮಂಡನೆ ಮಾಡಿದವರೂ ಇದ್ದಾರೆ. ಬಜೆಟ್‌ ಮಂಡಿಸುತ್ತಿದ್ದ ಸಮಯವೂ ಸಂಜೆಯಿಂದ ಬೆಳಗ್ಗಗೆ ಬದಲಾದ ಉದಾಹರಣೆಯೂ ಇದೆ. ಇತಿಹಾಸದಲ್ಲಿ ಇಬ್ಬರು ಮಹಿಳೆಯರು ಬಜೆಟ್‌ ಮಂಡಿಸಿದ ಉದಾಹರಣೆ ಭಾರತದಲ್ಲಿದೆ. ಮೂರು ದಶಕದ ಹಿಂದೆ ಮಂಡನೆಯಾದ ಬಜೆಟ್‌ಗಳಿಂದ ಭಾರತ ಆರ್ಥಿಕವಾಗಿ ಕ್ರಾಂತಿಕಾರಿಯಾಗಿ ಬದಲಾವಣೆ ಕಂಡ ಹೆಜ್ಜೆ ಗುರುತುಗಳೂ ಇವೆ. ಈ ಎಲ್ಲಾ ವಿಶೇಷಗಳ ನೋಟ ಇಲ್ಲಿದೆ.

ಸ್ವತಂತ್ರ ಭಾರತದ ಮೊಟ್ಟಮೊದಲ ಕೇಂದ್ರ ಬಜೆಟ್ ಅನ್ನು 1947ರ ನವೆಂಬರ್ 26, ರಂದು ಮೊದಲ ಹಣಕಾಸು ಸಚಿವ ಆರ್.ಕೆ.ಷಣ್ಮುಖಂ ಚೆಟ್ಟಿ ಅವರು ಮಂಡಿಸಿದರು.

ಮಾಜಿ...