Kalaburgi, ಜನವರಿ 29 -- Kalaburgi Separate Railway Division: ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನವಾಗಿರುವ ಕಲಬುರಗಿಯಲ್ಲಿ ಪ್ರತ್ಯೇಕ ರೈಲ್ವೆ ವಿಭಾಗ ಬೇಕು ಎನ್ನುವುದು ನಾಲ್ಕು ದಶಕಗಳಿಗೂ ಮಿಗಿಲಾದ ಬೇಡಿಕೆ. ಈಗಾಗಲೇ ವಿಭಾಗ ಘೋಷಣೆಯಾದರೂ ಜಾರಿ ಮಾತ್ರ ಆಗಿಲ್ಲ. ಪ್ರತಿ ಬಜೆಟ್‌ನಲ್ಲೂ ಭಾರತದ ಬೇರೆ ಬೇರೆ ವಿಭಾಗಗಳಿಗೆ ಕೋಟ್ಯಂತರ ರೂ. ಅನುದಾನ ನೀಡಲಾಗುತ್ತಿದೆ. ಆದರೆ ಕಲುಬುರಗಿ ಭಾಗಕ್ಕೆ ಪ್ರತಿ ಬಜೆಟ್‌ನಲ್ಲಿ ಬರೀ ಒಂದು ಸಾವಿರ ರೂ. ಮಾತ್ರ ಒದಗಿಸಲಾಗುತ್ತಿದೆ. ಇದರಿಂದ ಈ ಭಾಗದ ಜನ ಕಲಬುರಗಿ ರೈಲ್ವೆ ವಿಭಾಗ ಚಾಲ್ತಿಯಾಗುವ ಅಧಿಕೃತ ಘೋಷಣೆ ಮಾಡಬೇಕು. ಈ ಬಜೆಟ್‌ ನಲ್ಲಿ ಹೆಚ್ಚಿನ ಅನುದಾನವನ್ನು ಕಲಬುರಗಿ ಭಾಗಕ್ಕೆ ಮೀಸಲಿಟ್ಟು ರೈಲ್ವೆ ಪ್ರಗತಿಗೆ ವಿಶೇಷ ಒತ್ತು ನೀಡಬೇಕು ಎನ್ನುವ ಬೇಡಿಕೆ ಕೇಳಿ ಬಂದಿದೆ.

Published by HT Digital Content Services with permission from HT Kannada....