ಭಾರತ, ಫೆಬ್ರವರಿ 1 -- Budget 2025 Highlights: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು (ಫೆ 1) ಲೋಕಸಭೆಯಲ್ಲಿ ಕೇಂದ್ರ ಬಜೆಟ್ 2025 ಅನ್ನು ಮಂಡಿಸಿದರು. ಬಜೆಟ್ ಭಾಷಣ ಆರಂಭಿಸುತ್ತಲೇ, ದೇಶಮಂಟೆ ಮಟ್ಟಿ ಕಾದು ಮನುಷಲು (ದೇಶವೆಂದರೆ ಮಣ್ಣಲ್ಲ, ಮನುಷ್ಯರು) ಎಂಬ ತೆಲುಗು ಕವಿ ಗುರಜಾಡ ಅಪ್ಪಾರಾವ್ ಅವರ ಕವಿತೆಯ ಸಾಲನ್ನು ಉಲ್ಲೇಖಿಸಿದರು. ಇದಕ್ಕೆ ಅನುಗುಣವಾಗಿಯೇ ಅವರು ತಮ್ಮ ಬಜೆಟ್ ಭಾಷಣದಲ್ಲಿ ಮಧ್ಯಮ ವರ್ಗದಿಂದ ಹಿಡಿದು ರೈತಾಪಿ ಜನರಿಗೆ ಅನುಕೂಲವಾಗುವ ಅನೇಕ ಅಂಶಗಳನ್ನು ಪ್ರಕಟಿಸಿದರು. ತೆರಿಗೆದಾರರಿಗೆ ಹೆಚ್ಚು ಅನುಕೂಲ ಪ್ರಕಟಿಸಿದ ನಿರ್ಮಲಾ ಸೀತಾರಾಮನ್ ಅವರು ಮುಂದಿನ ವರ್ಷದಿಂದ 12 ಲಕ್ಷ ರೂಪಾಯಿ ತನಕ ಆದಾಯ ತೆರಿಗೆ ಪಾವತಿಸಬೇಕಾಗಿಲ್ಲ ಎಂದರು. ರೈತರಿಗೂ ಹೊಸ ಯೋಜನೆಗಳನ್ನು ಘೋಷಿಸಿದರು. ಈಗ ಇರುವಂತ ಯೋಜನೆಗಳ ಉನ್ನತೀಕರಣವನ್ನೂ ಪ್ರಕಟಿಸಿದರು. ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಭಾಷಣದ 10 ಮುಖ್ಯ ಘೋಷಣೆಗಳ ಕಡೆಗೆ ಗಮನಹರಿಸೋಣ.

1) ಆದಾಯ ತೆರಿಗೆ ವಿನಾಯಿತಿ: ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್...