Bangalore, ಫೆಬ್ರವರಿ 1 -- ಕೇಂದ್ರ ಬಜೆಟ್‌ 2024ರಂದು ಎಲ್‌ಪಿಜಿ ಗ್ಯಾಸ್ ವಾಣಿಜ್ಯ ಸಿಲಿಂಡರ್ ಬೆಲೆ ಪರಿಷ್ಕರಣೆಯಾಗಿದೆ. ತೈಲ ಮಾರುಕಟ್ಟೆ ಕಂಪನಿಗಳು ತಮ್ಮ ಮಾಸಿಕ ದರ ಪರಿಷ್ಕರಣೆ ಪದ್ಧತಿಯಡಿಯಲ್ಲಿ ಫೆಬ್ರವರಿ 1ರಂದು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರವನ್ನು 7 ರೂ.ಗಳಷ್ಟು ಕಡಿತಗೊಳಿಸಿವೆ. ಕೇಂದ್ರ ಬಜೆಟ್ 2025 ಮಂಡನೆ ದಿನವೇ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಕಡಿತ ಮಾಡಲಾಗಿದೆ.

ಹೊಸ ದರವು 19 ಕೆಜಿಯ ವಾಣಿಜ್ಯ ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌ಗಳಿಗೆ ಮಾತ್ರ ಅನ್ವಯವಾಗುತ್ತದೆ. ಈ ಸಿಲಿಂಡರ್‌ಗಳನ್ನು ಮುಖ್ಯವಾಗಿ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಇತರ ವ್ಯವಹಾರಗಳಲ್ಲಿ ವಾಣಿಜ್ಯ ಉದ್ದೇಶಗಳಿಗಾಗಿ ಬಳಸಲಾಗುತ್ತದೆ.

ದೆಹಲಿಯಲ್ಲಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು 7 ರೂ.ಗಳಿಂದ 1,797 ರೂ.ಗಳಿಗೆ ಇಳಿಸಲಾಗಿದೆ. ಬೆಲೆ ಕಡಿತವು ತಮ್ಮ ದೈನಂದಿನ ಕಾರ್ಯಾಚರಣೆಗಳಿಗಾಗಿ ಎಲ್‌ಪಿಜಿಯನ್ನು ಹೆಚ್ಚು ಅವಲಂಬಿಸಿರುವ ವ್ಯವಹಾರಗಳಿಗೆ ಪರಿಹಾರವನ್ನು ನೀಡುವ ನಿರೀಕ್ಷೆಯಿದೆ. ಬೆಂಗಳೂರಿನಲ್ಲಿ ಇಂದು 1,874 ರೂಪಾ...