Bangalore, ಜನವರಿ 28 -- ಕೇಂದ್ರ ಬಜೆಟ್‌ 2025ರ ಮಂಡನೆಗೆ ಇನ್ನೇನೂ ಕೆಲವೇ ದಿನಗಳು ಬಾಕಿ ಇದೆ. ಕೇಂದ್ರ ಬಜೆಟ್‌ನೊಂದಿಗೆ ರೈಲ್ವೆ ಇಲಾಖೆಯೂ ಸೇರಿರುವುದರಿಂದ ಮೊದಲಿನಂತೆ ಪ್ರತ್ಯೇಕ ಬಜೆಟ್‌ ಮಂಡನೆ ಇರುವುದಿಲ್ಲ. ಆದರೂ ರೈಲ್ವೆ ಇಲಾಖೆಗಳ ನಿರೀಕ್ಷೆಗಳು ಹೆಚ್ಚು ಇದ್ದೇ ಇರುತ್ತವೆ. ಅದರಲ್ಲೂ ವರ್ಷದಿಂದ ವರ್ಷಕ್ಕೆ ಭಾರತದಲ್ಲಿ ರೈಲ್ವೆ ಸಂಪರ್ಕ ಜಾಲ, ಮೂಲಸೌಕರ್ಯಗಳ ಅಭಿವೃದ್ದಿ, ಹೊಸ ಮಾದರಿಯ ರೈಲುಗಳ ಸೇವೆ, ರೈಲ್ವೆ ಸೇವೆಗೆ ತಂತ್ರಜ್ಞಾನದ ಮಿಳಿತ ಹೆಚ್ಚಾಗುತ್ತಿದೆ. ದಕ್ಷಿಣ ಭಾರತದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕವೂ ಕೂಡ ಹಿಂದಿನಿಂದಲೂ ರೈಲ್ವೆ ವಲಯಕ್ಕೆ ನಿರೀಕ್ಷೆಯಷ್ಟು ಬಜೆಟ್‌ನಲ್ಲಿ ಬೆಂಬಲ ಸಿಗದೇ ಇದ್ದರೂ ಪ್ರಮುಖ ಯೋಜನೆಗಳ ಅನುಷ್ಠಾನ, ಬೆಂಗಳೂರು ಸಹಿತ ಪ್ರಮುಖ ನಗರಗಳಲ್ಲಿ ರೈಲ್ವೆ ಸೇವೆ ಉನ್ನತೀಕರಣ,ನಿಲ್ದಾಣಗಳ ಅಭಿವೃದ್ದಿ, ಪ್ರಮುಖ ಮಾರ್ಗಗಳ ಜಾರಿಗೆ ಒತ್ತು ಸಿಕ್ಕಿದೆ. ಈ ಬಾರಿಯೂ ಬಜೆಟ್‌ನಲ್ಲಿ ಹೆಚ್ಚಿನ ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿದೆ.

Published by HT Digital Content Services with p...