Delhi, ಫೆಬ್ರವರಿ 1 -- Union Budget 2025: ಕೇಂದ್ರ ಸರ್ಕಾರವು ಭಾರತದಲ್ಲಿನ ವಿಮಾನ ಯಾನ ಸೇವೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಸಂಪರ್ಕ ಜಾಲವನ್ನು ಬಲಪಡಿಸುವ ಭಾಗವಾಗಿ ಉಡಾನ್‌ ಯೋಜನೆಗೆ ಇನ್ನಷ್ಟು ಶಕ್ತಿ ತುಂಬುವುದಾಗಿ ಹೇಳಿದೆ. ಉಡಾನ್‌( ಉಡೇ ದೇಶ್‌ ಕ ಆಮ್‌ ನಾಗರೀಕ್‌) ಅಡಿ ಸಾಮಾನ್ಯ ನಾಗರೀಕರು ವಿಮಾನ ಯಾನ ಬಳಸಿಕೊಳ್ಳಬೇಕು ಎಂದು ಕೆಲ ವರ್ಷದ ಹಿಂದೆ ಘೋಷಿಸಿ ಜಾರಿಗೊಳಿಸಿರುವ ಯೋಜನೆಯನ್ನು ಇನ್ನಷ್ಟು ವಿಸ್ತರಣೆ ಮಾಡುವ ಘೋಷಣೆಯನ್ನು ಈ ಬಾರಿ ಕೇಂದ್ರ ಬಜೆಟ್‌ನಲ್ಲಿ ಮಾಡಲಾಗಿದೆ. ಅಂದರೆ ಭಾರತದ ಸುಮಾರು ಹೊಸ 120 ಸ್ಥಳಗಳಿಗೆ ವಿಮಾನ ಯಾನವನ್ನು ಉಡಾನ್‌ ಅಡಿ ಕಲ್ಪಿಸಿಕೊಡುವ ಗುರಿಯನ್ನು ಮುಂದಿನ ಹತ್ತು ವರ್ಷಕ್ಕೆ ಹಾಕಿಕೊಳ್ಳಲಾಗಿದೆ. ಇದರಡಿ ಇನ್ನೂ ಹೆಚ್ಚುವರಿ 4 ಕೋಟಿ ಪ್ರಯಾಣಿಕರು ವಿಮಾನಯಾನ ಸೇವೆಯನ್ನು ಪಡೆದುಕೊಳ್ಳುವ ಅಂಶವನ್ನು ನಿರ್ಮಲಾ ಸೀತಾರಾಮನ್‌ ತಮ್ಮ ಬಜೆಟ್‌ನಲ್ಲಿ ಉಲ್ಲೇಖಿಸಿದ್ದಾರೆ.

Published by HT Digital Content Services with permission from HT Kannada....