ಭಾರತ, ಏಪ್ರಿಲ್ 28 -- ಇತ್ತೀಚಿನ ತಾಯಂದಿರು ಮಗುವಿಗೆ ಹಾಲೂಡಿಸಲು ಎದೆಹಾಲಿನ ಕೊರತೆ ಎದುರಿಸುತ್ತಿದ್ದಾರೆ. ಮಗುವಿಗೆ ಅವಶ್ಯ ಇರುವಷ್ಟು ಹಾಲಿಲ್ಲದೇ ಮಗುವಿನ ಬೆಳವಣಿಗೆಗೆ ತೊಂದರೆ ಎದುರಾಗುತ್ತಿದೆ. ಮಗು ಆರೋಗ್ಯವಾಗಿರಲು ಹಾಗೂ ಅಭಿವೃದ್ಧಿ ಹೊಂದಲು ಎದೆಹಾಲು ಅತ್ಯಗತ್ಯ. ನೀವು ಮತ್ತು ನಿಮ್ಮ ಮಗುವಿಗೆ ಶುಶ್ರೂಷೆ ಮಾಡಲು ಉತ್ತಮವಾದ ಪೌಷ್ಟಿಕ ಹಾಗೂ ಸಮತೋಲಿತ ಆಹಾರವು ಬಹಳ ಮುಖ್ಯವಾಗುತ್ತದೆ. ಗ್ಯಾಲಕ್ಟೋಗೋಗ್‌ಗಳು ಎದೆಹಾಲಿನ ಉತ್ಪಾದನೆಯನ್ನು ಹೆಚ್ಚಿಸುವ ಆಹಾರಗಳಾಗಿವೆ. ಆದರೆ ನೀವು ಸ್ತನ್ಯಪಾನ ಹೆಚ್ಚಿಸಿಕೊಳ್ಳಲು ಯಾವುದೇ ಗಿಡಮೂಲಿಕೆ ಚಿಕಿತ್ಸೆಯನ್ನು ಬಳಸುವ ಮೊದಲು ನಿಮ್ಮ ವೈದ್ಯರ ಅನುಮೋದನೆಯನ್ನು ಪಡೆದುಕೊಳ್ಳಿ. ಎದೆಹಾಲು ಹೆಚ್ಚಿಸಲು ನೆರವಾಗುವ ಕೆಲಸ ಮನೆಮದ್ದುಗಳು ಇಲ್ಲಿವೆ ನೋಡಿ.

ಎದೆಹಾಲು ಉತ್ಪಾದಿಸುವ ಆಹಾರ ಉತ್ಪನ್ನಗಳಲ್ಲಿ ಮೆಂತ್ಯೆ ಪ್ರಮುಖದ್ದು. ಮೆಂತ್ಯೆವನ್ನು ಪೂರಕ ಆಹಾರವಾಗಿ ಹಾಗೂ ಮಾತ್ರೆಗಳ ರೂಪದಲ್ಲಿ ನೀಡಲಾಗುತ್ತದೆ. ಇದನ್ನು ರಾತ್ರಿಯಿಡೀ ಒಂದು ಲೋಹ ನೀರಿನಲ್ಲಿ ನೆನೆಸಿಟ್ಟು ಸೇವಿಸಬಹುದು. ಬೆಳಿಗ್...